ADVERTISEMENT

ಬಪ್ಪಿ ಲಹಿರಿಗೆ ಮರಳು ಶಿಲ್ಪದ ಮೂಲಕ ನಮನ ಸಲ್ಲಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 11:00 IST
Last Updated 17 ಫೆಬ್ರುವರಿ 2022, 11:00 IST
ಬಪ್ಪಿ ಲಹಿರಿ ಮರಳು ಶಿಲ್ಪ
ಬಪ್ಪಿ ಲಹಿರಿ ಮರಳು ಶಿಲ್ಪ   

ಬಾಲಿವುಡ್‌ನಲ್ಲಿ ‘ಡಿಸ್ಕೊ ಕಿಂಗ್‌’ ಎಂದೇ ಖ್ಯಾತರಾಗಿದ್ದ ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ ಅವರ ನಿಧನಕ್ಕೆ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.

ಪುರಿಯ ಕಡಲ ತೀರದಲ್ಲಿ ಮರಳಿನಲ್ಲಿ ಬಪ್ಪಿ ಲಹಿರಿ ಅವರ ಶಿಲ್ಪಾಕೃತಿಯನ್ನು ರಚಿಸುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಅದರಲ್ಲಿ‘ಯಾದ್ ಆ ರಹಾ ಹೈ ತೇರಾ ಪ್ಯಾರ್’ (ನಿಮ್ಮ ಪ್ರೀತಿ ನೆನಪಿಗೆ ಬರುತ್ತಿದೆ) ಎಂದು ಬರೆದಿದ್ದಾರೆ.

ಸುದರ್ಶನ್‌ ಪಟ್ನಾಯಕ್‌ ಅವರು ಆ ಶಿಲ್ಪಾಕೃತಿಯ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಬಪ್ಪಿ ಲಹಿರಿ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ (1952) ಜನಿಸಿದ ಅಲೋಕೇಶ್‌ ಲಹಿರಿ (ಮುಂದೆ ಖ್ಯಾತಿ ಪಡೆದಿದ್ದು ಬಪ್ಪಿ ಹೆಸರಲ್ಲಿ) ಸಂಗೀತದ ಹಿನ್ನೆಲೆಯ ಕುಟುಂಬದಿಂದಲೇ ಬಂದವರು. ತಂದೆಯ ಸ್ನೇಹಿತರೊಬ್ಬರ ನೆರವಿನೊಂದಿಗೆ ಬಾಲಿವುಡ್‌ ಪ್ರವೇಶಿಸಿರು. 70 ಹಾಗೂ80ರ ದಶಕದಲ್ಲಿ ಹಲವು ಸಿನಿಮಾಗಳಿಗೆ ಸಂಗೀತ ನೀಡುವ ಮೂಲಕ ಜನಪ್ರಿಯತೆ ಪಡೆದರು.

ಕನ್ನಡದ ‘ಆಫ್ರಿಕಾದಲ್ಲಿ ಶೀಲಾ’, ‘ಕೃಷ್ಣಾ ನೀ ಬೇಗನೆ ಬಾರೊ’ ಹಾಗೂ ‘ಪೊಲೀಸ್‌ ಮತ್ತು ದಾದಾ ಚಿತ್ರಗಳಿಗೆ ಸಂಗೀತ ನೀಡಿದ್ದ ಬಪ್ಪಿ ಕೆಲವು ಗುನುಗುನಿಸುವ ಹಾಡುಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.