ಬೆಂಗಳೂರು: ಬಾಲಿವುಡ್‌ನ ಮುಂದಿನ ಪೀಳಿಗೆ ಎಂದೇ ಗುರುತಿಸಲ್ಪಡುವ ಸುಹಾನಾ ಖಾನ್, ಅನನ್ಯಾ ಪಾಂಡೆ ಮತ್ತು ಶಾನಾಯ ಕಪೂರ್ ಅವರ ನಡುವಣ ಗೆಳೆತನ ಎಲ್ಲರಿಗೂ ತಿಳಿದಿದೆ.
ಪ್ರವಾಸ ಹೋಗುವುದು ಮತ್ತು ಹೊಸ ಹೋಟೆಲ್, ವಿಹಾರ, ವಾರಾಂತ್ಯದ ಪಾರ್ಟಿ.. ಹೀಗೆ ಎಲ್ಲ ಸಂದರ್ಭದಲ್ಲೂ ಇವರು ಜತೆಯಾಗಿರುತ್ತಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಸುಹಾನಾ, ಅನನ್ಯಾ ಮತ್ತು ಶಾನಾಯ ಜತೆಯಾಗಿ ಪಾರ್ಟಿಯಲ್ಲಿ ಪಾಲ್ಗೊಂಡ ಸಂದರ್ಭದ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲಿ ಮಹಿಳೆ ಇರುತ್ತಾಳೆಯೋ.. ಅಲ್ಲಿ ಮ್ಯಾಜಿಕ್ ಇರುತ್ತದೆ ಎನ್ನುವ ಅಡಿಬರಹವನ್ನು ಅನನ್ಯಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ನೀಡಿದ್ದಾರೆ.
ಬಾಲ್ಯದಿಂದಲೂ ಸುಹಾನಾ, ಅನನ್ಯಾ ಮತ್ತು ಶಾನಾಯ ಗೆಳತಿಯರಾಗಿದ್ದು, ಚಿತ್ರರಂಗ ಪ್ರವೇಶಿಸಿದ ಬಳಿಕವೂ ಗೆಳೆತನ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.