ನವದೆಹಲಿ: 2025ರ ಆಸ್ಕರ್ ಪ್ರಶಸ್ತಿಗೆ ಕನ್ನಡದ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ಅರ್ಹತೆ ಪಡೆದಿದೆ.
ಈ ಚಿತ್ರ ನೈಜ ದೃಶ್ಯಗಳ ಕಿರುಚಿತ್ರ ವಿಭಾಗದಲ್ಲಿ ಅರ್ಹತೆ ಪಡೆದಿದೆ. ಈ ಕಿರು ಸಿನಿಮಾವನ್ನು ಫಿಲ್ಮಂ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ವಿದ್ಯಾರ್ಥಿಗಳು ಅಂತಿಮ ವರ್ಷದ ಅಧ್ಯಯನದ ಭಾಗವಾಗಿ ನಿರ್ಮಿಸಿದೆ.
ಮೇ ತಿಂಗಳಲ್ಲಿ ಈ ಚಿತ್ರ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರು ಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿತ್ತು.
ಈ ಚಿತ್ರವನ್ನು ಮೈಸೂರಿನ ಚಿದಾನಂದ ಎಸ್. ನಾಯ್ಕ್ ನಿರ್ದೇಶಿಸಿದ್ದಾರೆ, ಸೂರಜ್ ಠಾಕೂರ್ ಛಾಯಾಗ್ರಹಣ, ಮನೋಜ್ ವಿ ಎಡಿಟಿಂಗ್, ಮತ್ತು ಅಭಿಶೇಕ್ ಕದಮ್ ಅವರು ಧ್ವನಿ ನೀಡಿದ್ದರು.
ಈ ಕುರಿತು ಮಾತನಾಡಿರುವ ನಿರ್ದೇಶಕ ಚಿದಾನಂದ್, ‘ನನಗೆ ನೆನಪಿರುವಷ್ಟು ಸಮಯದಿಂದ ಈ ಕಥೆಯನ್ನು ಹೇಳಲು ಬಯಸಿದ್ದೆ. ಈ ಕಥೆಯನ್ನು ಕೇಳುವುದು ಮಾತ್ರವಲ್ಲದೆ ಅದನ್ನು ಮರುಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಈ ಕಥೆ ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರನ್ನು ಪ್ರತಿಧ್ವನಿಸಲಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.