ADVERTISEMENT

ಟೀಕೆ, ಬಹಿಷ್ಕಾರ ಮೆಟ್ಟಿನಿಂತ ಸನ್ನಿ ಲಿಯೋನ್: ಮಹಿಳಾ ದಿನಕ್ಕೆ ವಿಶೇಷ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2021, 13:58 IST
Last Updated 8 ಮಾರ್ಚ್ 2021, 13:58 IST
ಸನ್ನಿ ಲಿಯೋನ್
ಸನ್ನಿ ಲಿಯೋನ್   

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ದೇಶದ ಪ್ರಮುಖ ಕಿರು ಅವಧಿಯ ವಿಡಿಯೊ ಶೇರಿಂಗ್ ತಾಣ ಮೋಜ್, #Unfiltered ಎಂಬ ವಿಶೇಷ ಅಭಿಯಾನ ಆರಂಭಿಸಿದ್ದು, ಮಹಿಳೆಯರು ತಮ್ಮ ಮಾತುಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್, ಮೋಜ್ ಮೂಲಕ ತಮ್ಮ ಕಥೆ ಹೇಳಿಕೊಂಡಿದ್ದಾರೆ.

ಮೋಜ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಸನ್ನಿ ಲಿಯೋನ್, ಆರಂಭದಲ್ಲಿ ತನ್ನನ್ನು ಉದ್ಯಮದಲ್ಲಿ ಯಾರೂ ಗುರುತಿಸಲಿಲ್ಲ. ಅಲ್ಲದೆ, ಅಸಹಕಾರ ಕೂಡ ಇತ್ತು, ಜತೆಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕರೆಯಲಿಲ್ಲ, ಎಲ್ಲೆಡೆ ಬಹಿಷ್ಕಾರವಿತ್ತು. ಹಲವು ಟೀಕೆಗಳಿಗೆ ಗುರಿಯಾಗಬೇಕಾಯಿತು, ಆದರೆ ಅವೆಲ್ಲ ಸವಾಲುಗಳನ್ನು ಎದುರಿಸಿ ಮೆಟ್ಟಿನಿಂತು ಇಂದು ನಾನು ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡಿದ್ದೇನೆ ಎಂದಿದ್ದಾರೆ.

ಜತೆಗೆ, ನನ್ನದೇ ಸ್ವಂತ ಉದ್ಯಮವಿದೆ, ಬೇಬಿ ಡಾಲ್‌ನ ಯಶಸ್ಸು, ಸಂತೋಷದಿಂದ ಕೂಡಿರುವ ಕುಟುಂಬ, ನನಗೆ ಬೇಕಾದಂತೆ ಬದುಕುವ ಸ್ವಾತಂತ್ರ ಎಲ್ಲವನ್ನೂ ಇಂದು ನಾನು ಹೊಂದಿದ್ದೇನೆ ಎಂದು ಸನ್ನಿ ಹೇಳಿದ್ದಾರೆ.

ADVERTISEMENT

ಮಹಿಳೆ ಜೀವನದಲ್ಲಿ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸಹೋದರಿಯಾಗಿ ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಾಳೆ. ಅದಕ್ಕಾಗಿ ಆಕೆ ತನ್ನಲ್ಲಿ ಕೆಲವೊಂದು ತ್ಯಾಗ ಮಾಡುತ್ತಾಳೆ, ಆದರೆ ಮಹಿಳೆ ಇತರರಿಗೆ ಮಾದರಿಯಾಗಿರಬೇಕು, ಇಂದಿನ ದಿನ ನಮ್ಮ ಪಾಲಿಗಿದೆ, ಅದನ್ನು ಅನುಭವಿಸಬೇಕು ಎಂದು ಸನ್ನಿ ಮೋಜ್ ಮೂಲಕ ವಿಶೇಷ ಸಂದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.