‘ಸೂಪರ್ ಸ್ಟಾರ್’ ಹೆಸರಿನ ಇನ್ನೊಂದು ಚಿತ್ರಕ್ಕೆ ಡಿ.4ರಂದು ಮುಹೂರ್ತ ನಡೆಯಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದು.
ಸಿನಿಮಾದ ಕುರಿತು ಮಾಹಿತಿ ನೀಡಿದ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು, ‘ಈ ಚಿತ್ರಕ್ಕಾಗಿ ನಾಲ್ಕು ವರ್ಷಗಳಿಂದ ಸಿದ್ಧತೆ ನಡೆಸಿದ್ದೇವೆ. ಸುಮಾರು 8ರಿಂದ10 ಕೋಟಿ ಬಜೆಟ್‌ನ ಸಿನಿಮಾ ಇದು. ಆರ್‌ವಿಬಿ ಸಿನಿಮಾಸ್ ಮತ್ತು ಮೈಲಾರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಡಿ. 7ರಿಂದ ಶೂಟಿಂಗ್ ಆರಂಭವಾಗಲಿದೆʼ ಎಂದರು.
ನಾಯಕಿಯ ಹುಡುಕಾಟ: ‘ನಾಯಕ6.2 ಅಡಿ ಎತ್ತರ ಇದ್ದಾರೆ. ಆ ಎತ್ತರಕ್ಕೆ ತಕ್ಕನಾದ ನಾಯಕಿಯ ಹುಡುಕಾಟ ನಡೆದಿದೆ. ಹಲವರ ಆಡಿಷನ್ ನಡೆಸಿದ್ದೇವೆ’ ಎಂದರು.
‘ರಾಘವೇಂದ್ರ ವಿ. ಅವರ ಸಂಗೀತ ಇದೆ. ಯೋಗಿ ಅವರ ಛಾಯಾಗ್ರಹಣ ಇರಲಿದೆ. ವಿಜಯ್ ಎನ್.ಕುಮಾರ್ ಅವರು ಸಂಕಲನ ಮಾಡಿದ್ದಾರೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶಕರು’ ಎಂದು ಅವರು ತಿಳಿಸಿದರು.
ಮೊದಲ ಹಂತದಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಮಾಸ್ಟರ್ ಅವರ ನೇತೃತ್ವದಲ್ಲಿ ನೃತ್ಯದ ಶೂಟಿಂಗ್ ನಡೆಯಲಿದೆ. ಅಂದ ಹಾಗೆ ಇದು ಅಂತರರಾಷ್ಟ್ರೀಯ ನೃತ್ಯಪಟುವೊಬ್ಬನ ಕಥೆ. ಪ್ಯಾರಿಸ್‌ನಲ್ಲಿಯೂ ಶೂಟಿಂಗ್ ನಡೆಯಲಿದೆ ಎಂದು ಅವರು ವಿವರಿಸಿದರು.
‘ಹಿಂದೆ ಉಪೇಂದ್ರ ಅಭಿನಯದ ‘ಸೂಪರ್ ಸ್ಟಾರ್’ಗೂ ಈ ‘ಸೂಪರ್ ಸ್ಟಾರ್’ಗೂ ಯಾವುದೇ ಸಂಬಂಧ ಇಲ್ಲ. ಎರಡೂ ಕಥೆಗಳು ಬೇರೆಯೇ ಆಗಿವೆ. ಈ ವಿಚಾರದಲ್ಲಿ ಗೊಂದಲ ಬೇಡ’ ಎಂದು ಸ್ಪಷ್ಟಪಡಿಸಿದರು.
ಎಲ್ಲವೂ ನಿಗದಿಯಂತೆ ನಡೆದರೆ ಮುಂದುನ ಜೂನ್, ಜುಲೈ ವೇಳೆಗೆ ಬಿಡುಗಡೆ ಮಾಡುವ ಚಿಂತನೆ ಇದೆ ಎಂದು ನಿರ್ದೇಶಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.