ಐಪಿಎಲ್ ಆಟಗಾರ ಸುರೇಶ್ ರೈನಾ ಅವರ ಬಯೋಪಿಕ್ ನಿರ್ಮಾಣಕ್ಕೆ ಬಾಲಿವುಡ್‌ನಲ್ಲಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ದಕ್ಷಿಣದ ಈ ಇಬ್ಬರು ನಟರು ನನ್ನ ಬಯೋಪಿಕ್‌ಗೆ ಜೀವ ತುಂಬ ಬಲ್ಲರು ಎಂದು ರೈನಾ ಹೇಳಿದ್ದಾರೆ.
ಸದ್ಯ ಬಾಲಿವುಡ್‌ನಲ್ಲಿ ಕ್ರಿಕೆಟ್ ತಾರೆಗಳ ಬಯೋಪಿಕ್ ನಿರ್ಮಾಣಕ್ಕೆ ಹೆಚ್ಚಿನ ಒಲವು ಕಂಡುಬರುತ್ತಿದೆ. ಸಚಿನ್ ಹಾಗೂ ಧೋನಿ ಅವರ ಬಯೋಪಿಕ್‌ಗಳು ಯಶಸ್ವಿಯಾಗಿರುವುದೇ ಇದಕ್ಕೆ ಕಾರಣ. ಈಗ ಸುರೇಶ್ ರೈನಾ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲಿದೆ.
ರೈನಾ ಬಯೋಪಿಕ್ ಇನ್ನು ಮಾತುಕತೆಯ ಹಂತದಲ್ಲಿದೆ. ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ಹೆಸರು ಅಂತಿಮವಾಗಿಲ್ಲ. ಸನ್ ಪಿಕ್ಚರ್ ರೈನಾ ಸಿನಿಮಾ ನಿರ್ಮಣ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇತ್ತೀಚಿಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರೈನಾ ‘ನನ್ನ ಬಯೋಪಿಕ್‌ನಲ್ಲಿ ತಮಿಳು ನಟ ಸೂರ್ಯ ಅಥವಾ ಮಲಯಾಳಂ ನಟ ದುಲ್ಕರ್ ಸಲ್ಮಾನ್ ನಟಿಸಿದರೆ ಚೆನ್ನಾಗಿರುತ್ತದೆ. ನನ್ನ ಮನಸ್ಸಿನಲ್ಲಿ ಇರುವುದು ಈ ಇಬ್ಬರು ನಟರು ಎಂದು ರೈನಾ ಹೇಳಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಅಕ್ಷಯ್ ಕುಮಾರ್ ಅಥವಾ ರಣವೀರ್ ಸಿಂಗ್‌ರೈನಾ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಟ ಸೂರ್ಯ ಜೊತೆರೈನಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಂತಿಮವಾಗಿ ಸೂರ್ಯ ಅವರೇ ರೈನಾ ಪಾತ್ರಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.