ನವದೆಹಲಿ: ಸಿನಿಮಾಗಳಿಂದ ಕೊಂಚ ಬಿಡುವು ಪಡೆದಿರುವ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ವಿಹಾರಕ್ಕೆಂದು ಉತ್ತರ ಅಮೆರಿಕದ ಕೋಸ್ಟರಿಕಾಕ್ಕೆ ತೆರಳಿದ್ದಾರೆ.
ಪ್ರವಾಸದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜ್ಯೋತಿಕಾ, ‘ಶುದ್ಧ ಜೀವನ’... ಓ ಬೇಬಿ ಒಂದು ದಿನ ನಮಗೆ ವಯಸ್ಸಾಗುತ್ತದೆ. ಆಗ ನಾವು ಹೇಳಬಹುದಾದ ಎಲ್ಲಾ ಕಥೆಗಳ ಬಗ್ಗೆ ಈಗಾಗಲೇ ಯೋಚಿಸೋಣ’ ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ದಂಪತಿ ದಟ್ಟಾರಣ್ಯ ನಡುವೆ ವನ್ಯಜೀವಿಗಳು, ವೃಕ್ಷ ಸಂಕುಲ, ಹಳ್ಳ, ತೊರೆಗಳನ್ನು ವೀಕ್ಷಿಸಿಸುವ ಮೂಲಕ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಓದಿ...ಅಪ್ಪನಾದ ವಿನಯ್ ಕುಮಾರ್; ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಚಾ ಸಿಂಗ್
ಜ್ಯೋತಿಕಾ 2006ರಲ್ಲಿ ಸೂರ್ಯ ಅವರನ್ನು ವಿವಾಹವಾಗಿದ್ದರು. ಇವರಿಗೆ ದಿಯಾ ಮತ್ತು ದೇವ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಇತ್ತೀಚೆಗೆ ತೆರೆ ಕಂಡಿರುವ ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಂ’ ಚಿತ್ರದಲ್ಲಿ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಜ್ಯೋತಿಕಾ ಕೂಡ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.