ಮುಂಬೈ:ಪ್ರಿಯಕರ ರೋಹಮನ್ ಶಾಲ್(31) ಅವರೊಂದಿಗಿನ ಸಂಬಂಧ ಕಡಿದುಕೊಂಡಿರುವ ವಿಚಾರವನ್ನುಬಾಲಿವುಡ್ ನಟಿ ಸುಷ್ಮಿತಾ ಸೇನ್(46) ಅವರು ಗುರುವಾರ ಬಹಿರಂಗಪಡಿಸಿದ್ದರು.
ಸುಮಾರು ಮೂರು ವರ್ಷಗಳ ಪ್ರೇಮಕ್ಕೆ ಅಂತ್ಯ ಹಾಡಿರುವ ಸುಷ್ಮಿತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ನೆಮ್ಮದಿಯ ಮುಖಭಾವವುಳ್ಳ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ಮಾಡಿರುವ ಚಿತ್ರದೊಂದಿಗೆ ‘ಶಾಂತಿಯು ಸುಂದರವಾಗಿದೆ’ ಎಂದು ಬರೆದುಕೊಂದಿದ್ದಾರೆ.
1996ರಲ್ಲಿ ಬಿಡುಗಡೆಯಾದ ‘ದಸ್ತಕ್’ ಚಿತ್ರದಿಂದಸುಶ್ಮಿತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ‘ನೋ ಪ್ರಾಬ್ಲಮ್’ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಾದ ಬಳಿಕ‘ಆರ್ಯ’ ವೆಬ್ ಸಿರೀಸ್ ಮೂಲಕ ಮತ್ತೆ ನಟನೆಗೆಮರಳಿದ್ದಾರೆ.
ಭಾರತದ ಮೊದಲ ‘ಭುವನ ಸುಂದರಿ’ ಎಂಬ ಶ್ರೇಯಕ್ಕೆ ಸುಷ್ಮಿತಾ ಸೇನ್ ಪಾತ್ರರಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.