ADVERTISEMENT

ಹೃದಯಾಘಾತದಿಂದ ವಾರದಲ್ಲಿ ಚೇತರಿಕೆ: ವರ್ಕೌಟ್ ಆರಂಭಿಸಿದ ಸುಶ್ಮಿತಾ ಸೇನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2023, 14:28 IST
Last Updated 7 ಮಾರ್ಚ್ 2023, 14:28 IST
   

ಮುಂಬೈ: ವಾರದ ಹಿಂದಷ್ಟೇ ಹೃದಯಾಘಾತಕ್ಕೊಳಗಾಗಿದ್ದ ಬಾಲಿವುಡ್ ನಟಿ ಸುಶ್ಮಿತಾ ಸೇನ್, ಚಿಕಿತ್ಸೆ ಬಳಿಕ ಚೇತರಿಸಿಕೊಂಡು ವರ್ಕೌಟ್ ಆರಂಭಿಸಿದ್ದಾರೆ.

'ಇತ್ತೀಚೆಗೆ, ನನಗೆ ಹೃದಯಾಘಾತ ಸಂಭವಿಸಿತ್ತು. ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ಪಡೆದಿದ್ದೇನೆ. ಹೃದಯಕ್ಕೆ ಸ್ಟೆಂಟ್ ಸಹ ಅಳವಡಿಸಲಾಗಿದೆ' ಎಂದು ಮಾರ್ಚ್ 2ರಂದು ಬಹಿರಂಗಪಡಿಸಿದ್ದರು.

ಮಾರ್ಚ್‌ 4ರಂದು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ್ದ 47 ವರ್ಷದ ನಟಿ, ದೊಡ್ಡ ಹೃದಯಾಘಾತದ ಬಳಿಕವೂ ನಾನು ಬದುಕುಳಿದೆ. ನನ್ನ ಅನಾರೋಗ್ಯಕ್ಕೆ ಜೀವನಶೈಲಿಯೇ ಕಾರಣ ಎಂದು ಹೇಳಿದ್ದರು.

ADVERTISEMENT

ಮಂಗಳವಾರ, ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಹೋಳಿ ಶುಭಾಶಯ ಹೇಳಿರುವ ನಟಿ, ತಮ್ಮ ಆರೋಗ್ಯದ ಮಾಹಿತಿ ಹಂಚಿಕೊಂಡಿದ್ದಾರೆ.

‘ಜೀವನಚಕ್ರಕ್ಕೆ ಹೃದ್ರೋಗ ತಜ್ಞರು ಹಸಿರು ನಿಶಾನೆ ತೋರಿದ್ದಾರೆ. ಸ್ಟ್ರೆಚಿಂಗ್ ಆರಂಭವಾಗಿದೆ. ಎಂತಹ ಅನುಭವ. ನಿಧಾನವಾದ ಉಸಿರಾಟ. ಇದು ನನ್ನ ಅತ್ಯಂತ ಸಂತಸದ ಹೋಳಿ. ನಿಮ್ಮ ಹೋಳಿ ಸಂಭ್ರಮ ಹೇಗಿದೆ? ಐ ಲವ್ ಯೂ’ಎಂದು ಬರೆದುಕೊಂಡಿರುವ ಮಾಜಿ ಭುವನ ಸುಂದರಿ, ತಮ್ಮ ಸ್ಟ್ರೆಚಿಂಗ್ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಸುಶ್ಮಿತಾಗೆ ಆಡಿಸನ್ ಕಾಯಿಲೆ ಇರುವುದು 2014ರಲ್ಲಿ ಪತ್ತೆಯಾಗಿತ್ತು. ಚಿಕ್ಕ ವಯಸ್ಸಿನಿಂದಲೇ ಹೃದಯದ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಅಭಿಮಾನಿಗಳಿಗೆ ಅವರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.