ಕಳೆದ ವರ್ಷ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಬಳಿಕ ಸುಮ್ಮನಿದ್ದ ನಟಿ ಸ್ವರ ಭಾಸ್ಕರ್, ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ತಮ್ಮ ಸಹೋದರಇಷಾನ್ ಭಾಸ್ಕರ್ ಜೊತೆಗೆ ಸ್ವಂತ ಪ್ರೊಡಕ್ಷನ್ ಹೌಸ್ ಆರಂಭಿಸಿದ ಸ್ವರ, ಈ ಸುದ್ದಿಯನ್ನು ಟ್ವೀಟ್ ಮಾಡಿದ್ದರು.
ಪ್ರೊಡಕ್ಷನ್ ಹೌಸ್‌ನ ಹೆಸರು ‘ಕಹಾನಿವಾಲಿ’. ಒಂದೂವರೆ ವರ್ಷದಿಂದ ಸ್ವರ ಮತ್ತು ಇಷಾನ್ ಈ ನಿಟ್ಟಿನಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದರಂತೆ.ಉತ್ತಮ ಸಿನಿಮಾಗಳಿಗೆ ಮತ್ತು ಮನರಂಜನೆ ಕಾರ್ಯಕ್ರಮಗಳಿಗೆ ‘ಕಹಾನಿವಾಲಿ’ಬೆನ್ನೆಲುಬಾಗಿ ನಿಲ್ಲಬೇಕು
ಎಂಬುದು ಸಂಸ್ಥೆಯ ಉದ್ದೇಶ ಎಂದು ಸ್ವರ ಬರೆದುಕೊಂಡಿದ್ದಾರೆ.
ಸಿನಿಮಾಗಳಿಗೆ ಬಂಡವಾಳ ಹೂಡುವ ಸಂದರ್ಭದಲ್ಲಿ ವಿಭಿನ್ನ ಕಥಾವಸ್ತು ಮತ್ತು ಪರಿಕಲ್ಪನೆಗಳಿಗೆ ಆದ್ಯತೆ ಕೊಡುತ್ತೇವೆ. ಚರ್ವಿತಚರ್ವಣ ಎನಿಸುವ ಕತೆಗಳನ್ನು ನಾವು ಉತ್ತೇಜಿಸುವುದಿಲ್ಲ ಎಂದು ಇಷಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.