ಭಿನ್ನ ಪಾತ್ರಗಳಿಗೆ ಹೆಸರಾಗಿರುವ 31ರ ಹರೆಯದ ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಾಂಡ್ ಕಿ ಆಂಖ್’ ಸಿನಿಮಾಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ.
ಮಹಿಳಾ ಸಬಲೀಕರಣ ಹಾಗೂ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಈ ಸಿನಿಮಾಗೆ ಈಗಾಗಲೇ ರಾಜಸ್ಥಾನ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ.
ಅನುರಾಗ್ ಕಶ್ಯಪ್ ಪ್ರೊಡಕ್ಷನ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ, ಜಗತ್ತಿನ ಅತೀ ಹಿರಿಯ ಶಾರ್ಪ್ ಶೂಟರ್ಸ್ ದಾದಿ ಅಂತಲೇ ಪ್ರಖ್ಯಾತರಾಗಿರುವ ಚಂದ್ರೋ ತೋಮರ್ ಹಾಗೂ ಪ್ರಕಾಶಿ ತೋಮರ್ ಅವರ ಜೀವನಾಧರಿತವಾಗಿದೆ. ತುಶಾರ್ ಹೀರ್ ನಂದಾನಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
60 ವರ್ಷದ ದಾದಿಯರ ಪಾತ್ರ ಮಾಡೋಕೆ, 31 ವರ್ಷದ ತಾಪ್ಸಿ ಹಾಗೂ 29 ವರ್ಷದ ಭೂಮಿ ತಮ್ಮ ಏಜ್ಗಿಂತ ಡಬಲ್ ಪ್ರಾಯದ ಪಾತ್ರವನ್ನು ನಿರ್ವಹಿಸಿದ್ದಾರೆ.
ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ನಟಿ ತಾಪ್ಸಿ ಅವರು, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ನಟರೊಂದಿಗೆ ಕಾಣಿಸಿಕೊಂಡು ಈಗಾಗಲೇ ಬಾಲಿವುಡ್‌ನಲ್ಲಿ ನೆಲೆ ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.