ಮುಂಬೈ: ಇತ್ತೀಚೆಗೆ ತಮ್ಮ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಬಗ್ಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ಶನಿವಾರ ಮೌನಮುರಿದಿದ್ದಾರೆ. ಈ ಕುರಿತು ಅವರು ಮೂರು ಟ್ವೀಟ್‌ಗಳ ಮೂಲಕ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.
‘ಮೂರು ಮುಖ್ಯ ವಿಷಯಗಳಿಗಾಗಿ ಮೂರು ದಿನ ತೀವ್ರ ತಪಾಸಣೆ ನಡೆಯಿತು. ಮೊದಲನೇಯದು,ಪ್ಯಾರಿಸ್‌ನಲ್ಲಿ ನಾನು ಹೊಂದಿದ್ದೇನೆ ಎಂದು ಹೇಳಲಾಗುತ್ತಿರುವಬಂಗಲೆಯ ಕೀಲಿಗಳು. ಏಕೆಂದರೆ ಬೇಸಿಗೆ ಹತ್ತಿರಲ್ಲೇ ಇದೆ’ ಎಂದು ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.
‘ಎರಡನೇಯದು, ನನ್ನನ್ನು ಸಿಲುಕಿಸಿ, ನನ್ನ ವಿರುದ್ಧ ನಿರಂತರ ದಾಳಿ ಮಾಡುವ ಸಲುವಾಗಿ ₹5 ಕೋಟಿಗೆ ಸಂಬಂಧಿಸಿದ ರಶೀದಿ. ಯಾಕೆಂದರೆ, ಈ ಹಣ ನನ್ನದಲ್ಲ ಎಂದು ನಾನು ಈ ಮೊದಲೇ ನಿರಾಕರಿಸಿದ್ದೇನೆ' ಎಂದು ಎರಡನೇ ಟ್ವೀಟ್‌ನಲ್ಲಿ ಹೇಳಿದ್ದಾರೆ.
‘ಗೌರವಾನ್ವಿತ ಹಣಕಾಸು ಸಚಿವರ ಪ್ರಕಾರ 2013ರಲ್ಲಿ ನನ್ನ ಮೇಲೆ ನಡೆದಿತ್ತು ಎನ್ನಲಾದ ದಾಳಿಯ ನನ್ನ ನೆನಪುಗಳು,'
'ಇನ್ನು ಮುಂದೆ ಬಹಳ ಅಗ್ಗವಾಗುವುದಿಲ್ಲ' (ನಾಟ್ ಸಸ್ತಿ ಎನಿ ಮೋರ್)’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.