ಬೆಂಗಳೂರು: ಕಳೆದ ಶುಕ್ರವಾರ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾದ ಈ ಮದುವೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಸದ್ದು ಮಾಡಿದೆ.
ಮದುವೆಗೆ ಭಾರತೀಯ ಚಿತ್ರರಂಗದ ಖ್ಯಾತನಾಮರು, ರಾಜಕಾರಣಿಗಳು, ವಿದೇಶಿ ಗಣ್ಯರು ಸೇರಿದಂತೆ ಅನೇಕ ಘಟನಾನುಘಟಿಗಳು ಸಾಕ್ಷಿಯಾದರು. ಅದರಲ್ಲೂ ಬಾಲಿವುಡ್‌ನ ದಂಡೇ ಮದುವೆಯಲ್ಲಿ ಎದ್ದು ಕಂಡಿತ್ತು.
ಆದರೆ, ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ತಾವು ಅಂಬಾನಿ ಕುಟುಂಬದ ಮದುವೆಗೆ ಏಕೆ ಹೋಗಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ.
ಬಾಲಿವುಡ್ ಗಾಸಿಪ್ ಎನ್ನುವ ಚಾನಲ್‌ನಲ್ಲಿ ಮಾತನಾಡಿರುವ ಅವರಿಗೆ ಮದುವೆಗೆ ಏಕೆ ಹೋಗಿಲ್ಲ ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ನಟಿ, ‘ನನಗೆ ವೈಯಕ್ತಿಕವಾಗಿ ಅವರು ಗೊತ್ತಿಲ್ಲ. ಮದುವೆ ಎಂಬುದು ತೀರಾ ಖಾಸಗಿಯಾದ ವಿಚಾರ. ಅವರಿಗೆ ತುಂಬಾ ಜನರು ಗೊತ್ತಿರಬಹುದು. ಹಾಗಂತ, ಮದುವೆ ಹೋಗಬೇಕೆಂದರೆ ನಮಗೆ–ಅವರಿಗೆ ಸ್ವಲ್ಪನಾದರೂ ಪರಿಚಯ, ಸಂಬಂಧ ಇರಬೇಕು’ ಎಂದು ಹೇಳಿಕೊಂಡಿದ್ದಾರೆ.
ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಕಾರ್ಯಕ್ರಮಕ್ಕೆ ಒಟ್ಟಾರೆ ನಾಲ್ಕು ಸಾವಿರದಿಂದ 5ಸಾವಿರ ಕೋಟಿ ರೂಪಾಯಿವರೆಗೂ ಖರ್ಚಾಗಿದೆ ಎನ್ನಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.