ಬೆಂಗಳೂರು: ‘ಮಿಲ್ಕಿ ಬ್ಯೂಟಿ‘ ಹೆಸರಿನ ಖ್ಯಾತಿಯ ನಟಿ, ತಮನ್ನಾ ಭಾಟಿಯಾ ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬಂದಿದ್ದಾರೆ.
ಬಾಹುಬಲಿ ಸಿನಿಮಾದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ತಮನ್ನಾ ಜನಪ್ರಿಯತೆ ಗಳಿಸಿದ್ದರು.
ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಅವರು, ಅಲ್ಲಿನ ಕಡಲ ತೀರದ ಸಂಜೆ, ಆಕರ್ಷಕ ತಾಣ ಮತ್ತು ಬೀಚ್ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಸ್ಟೋರೀಸ್ ಹಾಕಿದ್ದರು.
ಅಭಿಮಾನಿಗಳು ತಮನ್ನಾ ಅವರ ಪೋಸ್ಟ್ ನೋಡಿ ಮೆಚ್ಚುಗೆ ಸೂಚಿಸಿದ್ದರು.
ಅಲ್ಲದೆ, ಐಸ್ ಕ್ರೀಮ್ ಮಾರಾಟ ಮಾಡುವ ಬೈಸಿಕಲ್‌ನಲ್ಲಿ ಕುಳಿತುಕೊಂಡು ಪೋಸ್ ಕೊಡುವ ಮೂಲಕ, ಯಾರಿಗೆ ಐಸ್ ಕ್ರೀಮ್ ಬೇಕು ಎಂದು ಕೇಳಿದ್ದರು.
ಮಧುರ್ ಭಂಡಾರ್ಕರ್ ಅವರ ಬಬ್ಲಿ ಬೌನ್ಸರ್ ಚಿತ್ರದಲ್ಲಿ ತಮನ್ನಾ ತೊಡಗಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.