ADVERTISEMENT

ತಮಿಳು ನಟ ವಿಕ್ರಮ್‌ ಅಭಿನಯದ ‘ತಂಗಲಾನ್‌’ ಚಿತ್ರ ಆಗಸ್ಟ್‌ 15ಕ್ಕೆ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2024, 11:16 IST
Last Updated 25 ಜುಲೈ 2024, 11:16 IST
<div class="paragraphs"><p>ತಂಗಲಾನ್‌ ಚಿತ್ರದ ಪೋಸ್ಟರ್&nbsp;</p></div>

ತಂಗಲಾನ್‌ ಚಿತ್ರದ ಪೋಸ್ಟರ್ 

   

ಚೆನ್ನೈ: ತಮಿಳು ನಟ ವಿಕ್ರಮ್‌ ಅಭಿನಯದ ತಂಗಲಾನ್‌ ಚಿತ್ರವು ಆಗಸ್ಟ್‌ 15ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ADVERTISEMENT

ಚಿತ್ರ ಬಿಡುಗಡೆ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ವಿಕ್ರಮ್ ವಿಡಿಯೊ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಪಾ. ರಂಜಿತ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 19ನೇ ಶತಮಾನದ ಗಣಿಗಾರಿಕೆ ವಿಷಯದ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಕೋಲಾರದ ಕೆಜಿಎಫ್‌ನ ಸುತ್ತಮುತ್ತ ಪ್ರದೇಶಗಳಲ್ಲಿ ಗಣಿಗಾರಿಕೆಯ ಇತಿಹಾಸ, ಧೈರ್ಯ, ಸಾಹಸ, ನಿರಂತರ ಅನ್ವೇಷಣೆಯ ಕುರಿತ ಕಥೆಯು ತೆರೆ ಮೇಲೆ ಮೂಡಲಿದೆ ಎನ್ನಲಾಗಿದೆ.

ತಂಗಲಾನ್‌ ಚಿತ್ರತಂಡವು ಶೀಘ್ರದಲ್ಲಿಯೇ ಕೋಲಾರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಮೂಲಕ ಕೇವಲ ಸಿನಿಮಾವನ್ನು ಮಾತ್ರವಲ್ಲದೇ ಭಾರತೀಯ ಸಿನಿಮಾದ ಕಲಾತ್ಮಕತೆ, ಸೃಜನಶೀಲತೆ, ಆಧ್ಯಾತ್ಮಿಕ ಅಂಶಗಳನ್ನು ಸಂಭ್ರಮಿಸುವುದಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ಅಭಿನಯಿಸಿದ್ದು, ಪಾ. ರಂಜಿತ್, ನೀಲಂ ಸ್ಟೂಡಿಯೋಸ್‌, ಸ್ಟೂಡಿಯೋಸ್‌ ಗ್ರೀನ್‌ ಹಾಗೂ ಜಿಯೋ ಸ್ಟೂಡಿಯೋಸ್‌ ನಿರ್ಮಿಸಿದೆ.

ಈ ಚಿತ್ರವು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.