ನಾಲ್ಕು ವರುಷಗಳ ನಂತರ ನಟಿ ತಾಪ್ಸಿ ಪನ್ನು ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಹ್ಮದ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಜಯಂ ರವಿ ಜೊತೆ ಅವರು ರೊಮಾನ್ಸ್ ಮಾಡಲಿದ್ದಾರೆ.
ಜಯಂ ರವಿ ಅವರ ‘ಕೋಮಲಿ’ ಚಿತ್ರವು ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಭಾರಿ ಯಶಸ್ಸು ಕಾಣುತ್ತಿದೆ. ಈ ಹಾಸ್ಯಚಿತ್ರದ ಬಗ್ಗೆ ಕೆಲ ಟೀಕೆಗಳು ಕೇಳಿಬಂದಿದ್ದರೂ, ಪ್ರೇಕ್ಷಕರ ಮನ ಗೆಲುವಲ್ಲಿ ಯಶಸ್ವಿಯಾಗಿದೆ.
ಈಗ ಅವರು ಹೊಸ ಸಿನಿಮಾಕ್ಕೆ ತಯಾರಿ ನಡೆಸಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ತಾಪ್ಸಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೇ ಮೊದಲ ಬಾರಿಗೆ ತಾಪ್ಸಿ ಹಾಗೂ ಜಯಂ ರವಿ ಒಟ್ಟಿಗೆ ನಟಿಸುತ್ತಿದ್ದಾರೆ.
ಕಾಲಿವುಡ್‌ನಲ್ಲಿ ತಾಪ್ಸಿ 2015ರಲ್ಲಿ ಬಿಡುಗಡೆಯಾದ ‘ವೈ ರಾಜಾ ವೈ’ ಚಿತ್ರದಲ್ಲಿ ನಟಿಸಿದ್ದರು. ‘ಗೇಮ್ ಓವರ್’ ಚಿತ್ರದಲ್ಲೂ ನಟಿಸಿದ್ದರು. ಈ ಚಿತ್ರ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಂತರ ತಮಿಳು ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು ಹಿಂದಿ ಸಿನಿಮಾಗಳತ್ತ ಗಮನ ಹರಿಸಿದ್ದರು. ಈಗ ಈ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.
ತಾಪ್ಸಿ, ಅಕ್ಷಯ್‌ಕುಮಾರ್ ಜೊತೆಗೆ ನಟಿಸಿರುವ ‘ಮಿಷನ್ ಮಂಗಲ್’ ಸಿನಿಮಾವು ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿದೆ. ಹಿಂದಿಯ ‘ತಡ್ಕ’ ಹಾಗೂ ‘ಸಾಂದ್ ಕಿ ಆಂಖ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.