ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ನಟನೆಯ ಬಹುನಿರೀಕ್ಷಿತ ಚಿತ್ರ ‘ತೇಜಸ್’ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು ಲಖನೌದಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಿನಿಮಾ ವೀಕ್ಷಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ‘ತೇಜಸ್ ಚಿತ್ರ ಯೋಧರು, ಹುತಾತ್ಮ ಯೋಧರ ಜೀವನಾಧಾರಿತ ಚಿತ್ರವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೋಸ್ಕರ ಚಿತ್ರದ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನೋಡುತ್ತಾ ಅವರು (ಯೋಗಿ ಆದಿತ್ಯಾನಾಥ) ಭಾವುಕರಾದರು’ ಎಂದರು.
‘ಚಿತ್ರಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ. ಚಿತ್ರ ವೀಕ್ಷಿಸುವಂತೆ ದೇಶಪ್ರೇಮಿಗಳಿಗೆ ಕರೆ ನೀಡಿದ್ದಾರೆ. ಇದು ಕೇವಲ ಮಹಿಳಾ ಸಬಲೀಕರಣವನ್ನು ತೋರಿಸುವ ಸಿನಿಮಾವಲ್ಲ. ಇದು ಮಹಿಳೆಯರ ಶಕ್ತಿ ಪ್ರದರ್ಶಿಸುವ ಸಿನಿಮಾವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.