ಹೈದರಾಬಾದ್: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ತೆಲುಗು ನಟ ಶ್ರೀ ತೇಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘ನನ್ನೊಂದಿಗೆ ಎರಡರಿಂದ ಮೂರು ತಿಂಗಳುಗಳ ಕಾಲ ಸಹಜೀವನದಲ್ಲಿದ್ದ ಶ್ರೀತೇಜ್, ಮದುವೆಯಾಗುವ ಭರವಸೆ ನೀಡಿದ್ದರು.ಈ ಅವಧಿಯಲ್ಲಿ ನನ್ನನ್ನು ಬಳಸಿಕೊಂಡ ಅವರು, ಈಗ ದೂರವಿರಿಸುತ್ತಿದ್ದಾರೆ. ಇದರಿಂದ ನನಗೆ ಮೋಸವಾಗಿದೆ ಎಂದು 34 ವರ್ಷದ ಮಹಿಳೆಯೊಬ್ಬರು ದೂರಿನಲ್ಲಿ ಹೇಳಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯ ದೂರಿನನ್ವಯ ಗಚ್ಚಿಬಾವಲಿ ಠಾಣೆಯಲ್ಲಿ ಝೀರೊ ಎಫ್ಐಆರ್ (ಪ್ರಕರಣದ ವ್ಯಾಪ್ತಿಯನ್ನು ಲೆಕ್ಕಿಸದೆ ದಾಖಲಿಸುವ ಎಫ್ಐಆರ್) ದಾಖಲಿಸಲಾಗಿತ್ತು. ಬಳಿಕ ಅದನ್ನು ಕುಕಟಪಲ್ಲಿ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಶ್ರೀ ತೇಜ್ ಅವರು ಪುಷ್ಪ– 2 ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಡಿ.5 ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ದಲಾರಿ, ಮಂಗಳವಾರಂ, ರಾವಣಾಸುರ, ಧಮಾಕಾ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರೀತೇಜ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.