ADVERTISEMENT

ನಾಲ್ಕೇ ದಿನದಲ್ಲಿ ₹100 ಕೋಟಿ ಗಳಿಸಿದ ತೆಲುಗಿನ HanuMan ಚಿತ್ರ

ಪಿಟಿಐ
Published 16 ಜನವರಿ 2024, 10:42 IST
Last Updated 16 ಜನವರಿ 2024, 10:42 IST
   

ಹೈದರಾಬಾದ್‌: ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಸಖತ್‌ ಸುದ್ದಿ ಮಾಡುತ್ತಿರುವ ಚಿತ್ರ ಹನುಮ್ಯಾನ್ (HanuMan). ತೇಜ್‌ ಸಜ್ಜಾ ನಟನೆಯ ಈ ಸಿನಿಮಾ ಕಳೆದ ಶುಕ್ರವಾರ(ಜ.12) ಬಿಡುಗಡೆಯಾಗಿದ್ದು, ನಾಲ್ಕು ದಿನದಲ್ಲಿ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹100 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಮಂಗಳವಾರ ಹೇಳಿದೆ. 

ಪ್ರಶಾಂತ್‌ ವರ್ಮಾ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರೊಡಕ್ಷನ್‌ ಹೌಸ್‌ ಪ್ರೈಮ್‌ ಶೋ ಎಂಟರ್‌ಟೈನ್ಮೆಂಟ್‌, ‘ಸಣ್ಣ ಚಿತ್ರ - ಪ್ರೇಕ್ಷಕರಿಂದ ದೊಡ್ಡ ನ್ಯಾಯ. ಗಲ್ಲಾಪೆಟ್ಟಿಗೆಯಲ್ಲಿ ಹನುಮಾನ್‌ನ ಘರ್ಜನೆ ಪ್ರತಿಧ್ವನಿಸಿದೆ. ಸೀಮಿತ ಥಿಯೇಟರ್‌ಗಳಲ್ಲಿ ಪ್ರದರ್ಶನ ಮತ್ತು ಕನಿಷ್ಠ ಟಿಕೆಟ್ ದರಗಳೊಂದಿಗೆ ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿ ಗಳಿಕೆ ಕಂಡಿದೆ ಎಂದು ಹೇಳಿದೆ.

ಹನುಮಾನ್‌ ಚಿತ್ರದ ಕಥೆ ಅಂಜನಾದ್ರಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಸಾಗುತ್ತದೆ. ಹನುಮಂತದ ರಕ್ತದ ಹನಿಯೊಂದು ಮಣಿಯಾಗಿ ಪರಿವರ್ತನೆಗೊಂಡು ಸಮುದ್ರದ ಆಳದಲ್ಲಿ ಭದ್ರವಾಗಿರುತ್ತದೆ. ಅದು ನಾಯಕನಿಗೆ ಸಿಕ್ಕಾಗ, ಆತನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ, ಸೂಪರ್‌ಮ್ಯಾನ್‌ ಆಗಬೇಕೆಂದು ಆ ಮಣಿಯನ್ನು ಕದಿಯಲು ಬಂದ ಖಳನಾಯಕನಿಂದ ಸ್ವಂತ ಊರು ಮತ್ತು ಮಣಿಯನ್ನು ನಾಯಕ ಹೇಗೆ ರಕ್ಷಿಸುತ್ತಾನೆ ಎನ್ನುವುದು ಕಥೆಯ ಸಣ್ಣ ಸಾರ. 

ADVERTISEMENT

ಕಾಡಿನ ಮಧ್ಯೆ ಇರುವ ಅಂಜನಾದ್ರಿ ಊರು ಹಾಗೂ ಹನುಮಂತನ ಬೃಹತ್‌ ಮೂರ್ತಿಯ ಗ್ರಾಫಿಕ್ಸ್‌ ನೋಡುಗರನ್ನು ಅಚ್ಚರಿಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.