ಬಹುತೇಕ ಹೊಸಬರಿಂದಲೇ ಕೂಡಿರುವ ‘ಚಾಕ್ನ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಕೆಲ ಚಿತ್ರಗಳನ್ನು ನಿರ್ದೇಶಿಸಿರುವ ಕನ್ನಡಿಗ ಕೆ.ಪಳನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್‌ಆರ್ ಕಂಬೈನ್ಸ್ ಅಡಿಯಲ್ಲಿ ವಿಮಲಾ ನಿರ್ಮಾಣ ಮಾಡುತ್ತಿದ್ದಾರೆ.
‘ಆರು ತಿಂಗಳ ಹಿಂದೆ ಪುದುಚೇರಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದ ಚಿತ್ರವಿದು. ಗಾಂಜಾ ಸೇದುವವರು, ಕುಡುಕ, ಕಳ್ಳ, ಅತ್ಯಾಚಾರಿ ಹೀಗೆ ನಾಲ್ಕು ನಕರಾತ್ಮಕ ಪಾತ್ರಗಳು ಒಂದಡೆ ಸೇರಿದರೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ‘ಚಾಕ್ನ’ ಅಂಗಡಿ ಮಾಲೀಕನ ಕುಟುಂಬದಲ್ಲಿ ನಡೆಯುವ ಸನ್ನಿವೇಶಗಳ ಸುತ್ತ ಕಥೆ ಸಾಗುತ್ತದೆ. ಹೀಗಾಗಿ ಈ ಶೀರ್ಷಿಕೆ ಇಡಲಾಗಿದೆ. ಗ್ರಾಫಿಕ್ಸ್ ಬಳಸದೆ, ಕಲಾವಿದರುಗಳಿಗೆ ಮೇಕಪ್ ಹಾಕದೆ, ನೈಜ ಸ್ಥಳಗಳಲ್ಲಿ ಕಚ್ಚಾ ಮಾದರಿಯಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು ನಿರ್ದೇಶಕರು.
ಕಾಕ್ರೋಚ್ ಸುಧೀ, ಗಿರಿ, ಮಧುಶ್ರೀ ಕಾಲ್ಮಟ್ ಮುಂತಾದವರು ಚಿತ್ರದಲ್ಲಿದ್ದಾರೆ. ಕಲ್ಕಿ ಅಭಿಷೇಕ್ ಸಂಗೀತ, ರಣಧೀರ ನಾಯಕ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.