ADVERTISEMENT

'ದಿ ಕಾಶ್ಮೀರ್ ಫೈಲ್ಸ್‘: ಮೂರು ದಿನದಲ್ಲಿ ₹31 ಕೋಟಿ ಗಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 4:57 IST
Last Updated 15 ಮಾರ್ಚ್ 2022, 4:57 IST
   

ಬೆಂಗಳೂರು: ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ, ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ದಾಖಲಿಸಿದೆ.

ಮಾರ್ಚ್ 11ರಂದು ದೇಶದಾದ್ಯಂತ 630 ಪರದೆಗಳಲ್ಲಿ ತೆರೆಕಂಡಿದ್ದ 'ದಿ ಕಾಶ್ಮೀರ್ ಫೈಲ್ಸ್‘, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಎರಡೇ ದಿನದಲ್ಲಿ 2000ಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಚಿತ್ರ ಮೂರು ದಿನಗಳಲ್ಲಿ ಒಟ್ಟಾರೆಯಾಗಿ ₹31.06 ಕೋಟಿ ಗಳಿಕೆ ದಾಖಲಿಸಿದೆ ಎಂದು ನಿರ್ದೇಶಕವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

ADVERTISEMENT

ಸಾಮಾಜಿಕ ತಾಣಗಳಲ್ಲೂ ಜನರು ಸಿನಿಮಾ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದು, ಪ್ರಚಾರ ನೀಡುತ್ತಿದ್ದಾರೆ. ಇದರಿಂದಾಗಿ 'ದಿ ಕಾಶ್ಮೀರ್ ಫೈಲ್ಸ್‘ ಮತ್ತಷ್ಟು ಹೆಚ್ಚಿನ ಪ್ರದರ್ಶನ ಕಾಣುತ್ತಿದೆ.

1990ರಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಚಿತ್ರಣವನ್ನು ಸಿನಿಮಾ ಪ್ರಸ್ತುತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.