ಬೆಂಗಳೂರು: 2022ರ ಮಾರ್ಚ್ 11ರಂದು ತೆರೆಕಂಡಿದ್ದ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವುದಕ್ಕಿಂತಲೂ ವಾದ ವಿವಾದಗಳಿಂದಲೇ ಹೆಚ್ಚು ಚರ್ಚೆಯಾಗಿತ್ತು.
ಇದೀಗ ಬಿಡುಗಡೆಯಾಗಿ ಒಂದೇ ವರ್ಷದಲ್ಲಿ 'ದಿ ಕಾಶ್ಮೀರ್ ಫೈಲ್ಸ್’ ಮರು ಬಿಡುಗಡೆಯಾಗುತ್ತಿದೆ. ಹೌದು, ಚಿತ್ರ ಜ.19 ರಂದು ಮರುಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ನಟ ಅನುಪಮ್ ಖೇರ್ ಅವರೂ ಈ ವಿಷಯವನ್ನು ಹಂಚಿಕೊಂಡಿದ್ದು, ಬಿಡುಗಡೆಯಾಗಿ ಒಂದೇ ವರ್ಷದಲ್ಲಿ ಚಿತ್ರವೊಂದು ಮರುಬಿಡುಗಡೆಯಾಗುತ್ತಿರುವ ಸಿನಿಮಾ ಬಹುತೇಕ 'ದಿ ಕಾಶ್ಮೀರ್ ಫೈಲ್ಸ್’ ಒಂದೇ ಇರಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಬೆಳ್ಳಿ ಪರದೆಯಲ್ಲಿ ಸಿನಿಮಾ ನೋಡದವರು ಈಗ ನೋಡಿ ಎಂದು ವಿವೇಕ್ ಅಗ್ನಿಹೋತ್ರಿ ಮನವಿ ಮಾಡಿದ್ದಾರೆ. ಚಿತ್ರ, ಬಿಡುಗಡೆಯಾಗಿ ಜಾಗತಿಕವಾಗಿ ₹200 ಕೋಟಿಗೂ ಅಧಿಕ ಆದಾಯ ಗಳಿಸಿತ್ತು.
ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಕುರಿತು 'ದಿ ಕಾಶ್ಮೀರ್ ಫೈಲ್ಸ್‘ ಚಿತ್ರ ತಯಾರಿಸಲಾಗಿದೆ.
ವಿವೇಕ್ ಅಗ್ನಿಹೋತ್ರಿ ಅವರ ಚಿತ್ರದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಸಹಿತ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.