ADVERTISEMENT

ಸಿನಿಸುದ್ದಿ | ಹೊರಬಂತು ‘ಬಘೀರ’ನ ಹಾಡು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:28 IST
Last Updated 18 ಅಕ್ಟೋಬರ್ 2024, 0:28 IST
ಶ್ರೀಮುರಳಿ
ಶ್ರೀಮುರಳಿ   

ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರ ಅಕ್ಟೋಬರ್ 31ರಂದು ತೆರೆಗೆ ಬರುತ್ತಿದೆ. ಅದರ ಬೆನ್ನಲ್ಲೇ ಚಿತ್ರದ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು, ‘ರುಧಿರ ಧಾರ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಚಿತ್ರವನ್ನು ಸೂರಿ ನಿರ್ದೇಶಿಸಿದ್ದಾರೆ. 

‘ರುಧಿರ ಧಾರ’ ಶೀರ್ಷಿಕೆ ಗೀತೆಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆದು, ಹಾಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಮಾತಿಲ್ಲದೆ, ಬರೀ ಆ್ಯಕ್ಷನ್‌ ದೃಶ್ಯಗಳಿಂದಲೇ ಕೂಡಿರುವ ಚಿತ್ರದ ಟೀಸರ್‌ ಮುರಳಿ ಬತ್ತಳಿಕೆಯಿಂದ ಮತ್ತೊಂದು ಮಾಸ್‌ ಚಿತ್ರದ ಮುನ್ಸೂಚನೆ ನೀಡಿತ್ತು. ಸಮಾಜದಲ್ಲಿನ ದುಷ್ಟಶಕ್ತಿಯನ್ನು ಮಟ್ಟಹಾಕಲು ಮುಖವಾಡ ಧರಿಸಿರುವ ಶ್ರೀಮುರಳಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಬಘೀರ’ನಿಗೆ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದು, ‘ಉಗ್ರಂ’ ಬಳಿಕ ಪ್ರಶಾಂತ್‌ ನೀಲ್‌– ಶ್ರೀಮುರಳಿ ಜೋಡಿಯ ಬಹುನಿರೀಕ್ಷಿತ ಚಿತ್ರ ಇದಾಗಿದೆ. ನವೀನ್ ಕುಮಾರ್ ಛಾಯಾಗ್ರಹಣವಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಸಲಾರ್​’ ರೀತಿಯೇ ಈ ಸಿನಿಮಾದ ಕಥೆ ಕೂಡ ಕತ್ತಲಿನಲ್ಲಿಯೇ ನಡೆಯುತ್ತದೆ ಎಂಬ ಮುನ್ಸೂಚನೆ ನೀಡುತ್ತಿದೆ ಚಿತ್ರದ ಪೋಸ್ಟರ್‌ ಹಾಗೂ ಟೀಸರ್‌. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.