ಬೆಂಗಳೂರು: ‘ಲೇಟಾಗಿ ಬಂದ್ರು ಲೇಟೆಸ್ಟಾಗಿ ಬರ್ತಿವಿ’ –ಇದು ನಟ ಜಗ್ಗೇಶ್ ‘ತೋತಾಪುರಿ’ ಚಿತ್ರದ ಟೀಸರ್ ಪ್ರೋಮೊ ಬಿಡುಗಡೆ ಕುರಿತು ಆಡಿರುವ ಮಾತುಗಳಿವು.
ಹೌದು, ‘ನೀರ್ದೋಸೆ’ಯ ವಿಜಯ್ ಪ್ರಸಾದ್–ಜಗ್ಗೇಶ್ ಜೋಡಿ ಇದೀಗ ‘ತೋತಾಪುರಿ’ ಸಿನಿಮಾದಲ್ಲಿ ಒಂದಾಗಿದ್ದು, ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಸದ್ಯ ಸಿನಿಮಾದ ಟೀಸರ್ ಪ್ರೋಮೊ ಬಿಡುಗಡೆ ಆಗಿದ್ದು, ಶೀಘ್ರವೇ ಪ್ರೇಕ್ಷಕರ ಎದುರು ಬರುವ ಮೂನ್ಸೂಚನೆಯನ್ನು ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ‘ಆತ್ಮೀಯರೆ ತೋತಾಪುರಿ ಚಿತ್ರದ ಟೀಸರ್ ಬಿಡುಗಡೆಗೆ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಾನು ಸೇರಿ ಮುನ್ನುಡಿ ಬರೆದಿದ್ದೇವೆ. ನಗಿಸುವ ನಮ್ಮ ಕಾಯಕಕ್ಕೆ ನಿಮ್ಮ ಶುಭಹಾರೈಕೆ ಇರಲಿ’ ಎಂದು ಬರೆದುಕೊಂಡಿದ್ದಾರೆ.
ಎರಡು ಭಾಗಗಳಲ್ಲಿ ಈ ಚಿತ್ರವು ತೆರೆ ಕಾಣಲಿದ್ದು, ಲಾಕ್ಡೌನ್ಗೂ ಮುನ್ನ ಎರಡೂ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.