ಮುಂಬೈ: ‘ಲವ್ ಇನ್ ಉಕ್ರೇನ್’ಹಿಂದಿ ಚಿತ್ರದಲ್ಲಿ ನಟಿಸಿದ್ದ ಮೂವರು ಉಕ್ರೇನ್‌ನ ನಟರು ನಾಪತ್ತೆಯಾಗಿದ್ದಾರೆ ಎಂದು ಚಿತ್ರದ ನಿರ್ದೇಶಕ ನಿತಿನ್ ಕುಮಾರ್ ಗುಪ್ತಾ ಹೇಳಿದ್ದಾರೆ. ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸುವುದಕ್ಕೂ ಕೆಲ ದಿನಗಳ ಮುನ್ನ ಅವರು ಚಿತ್ರೀಕರಣ ಮುಗಿಸಿದ್ದರು.
ಚಿತ್ರದ ನಾಯಕಿ ಲಿಜಾ, ಉಕ್ರೇನ್ ರಾಜಧಾನಿ ಕೀವ್‌ನ ಆಗ್ನೇಯಕ್ಕೆ ಇರುವ ದಿನಿಪ್ರೊ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಯುದ್ಧ ಪ್ರಾರಂಭವಾದಾಗಿನಿಂದ, ನಾವು ಎಲ್ಲ ಸಿಬ್ಬಂದಿ ಮತ್ತು ನಮ್ಮ ಚಿತ್ರದಲ್ಲಿ ನಟಿಸಿದ ಉಕ್ರೇನ್‌ನ ಕಲಾವಿದರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದೇವೆ. ನಟರಾದ ಆರ್ಟೆಮ್, ವೊಲೊಡಿಮ್ ಮತ್ತು ಮಿಶಾ ಸಂಪರ್ಕ ಸಾಧ್ಯವಾಗುತ್ತಿಲ್ಲ’ಎಂದು ಅವರು ಹೇಳಿದ್ದಾರೆ.
‘ಲಿಜಾ ಅವರು ಡಿನಿಪ್ರೊ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ಗೊತ್ತಾಗಿದೆ. ಸಮಸ್ಯೆಯೆಂದರೆ ನಾವು ಅವರನ್ನು ಉಕ್ರೇನ್‌ನ ಗಡಿಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಅವರಿಗೆ ಭಾರತಕ್ಕೆ ಬಂದು ಇಲ್ಲಿಯೇ ಇರುವಂತೆ ನಾವು ಸೂಚಿಸಿದ್ದೇವೆ’ಎಂದು ನಿತಿನ್ ಕುಮಾರ್ ಗುಪ್ತಾ ಹೇಳಿದ್ದಾರೆ.
‘ಲವ್ ಇನ್ ಉಕ್ರೇನ್’ಚಿತ್ರವು, ರಷ್ಯಾದ ಮಾಫಿಯಾ ಕುಟುಂಬದ ಹುಡುಗಿಯನ್ನು (ಲಿಜಾ) ಭಾರತೀಯ ವಿದ್ಯಾರ್ಥಿ ಪ್ರೀತಿಸಿ ಮದುವೆಯಾಗುವ ಕಥಾವಸ್ತುವನ್ನು ಹೊಂದಿದೆ.
‘ಬುಕಾ, ಕೀವ್, ಒಡೆಸ್ಸಾ ನಗರಗಳು ಸೇರಿದಂತೆ ಸಂಪೂರ್ಣ ಚಿತ್ರವನ್ನು ಉಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.