ADVERTISEMENT

ಟೈಟಾನಿಕ್, ಅವತಾರ್ ಚಿತ್ರಗಳ ನಿರ್ಮಾಪಕ ಜಾನ್ ಲ್ಯಾಂಡೊ ನಿಧನ

ಏಜೆನ್ಸೀಸ್
Published 7 ಜುಲೈ 2024, 4:37 IST
Last Updated 7 ಜುಲೈ 2024, 4:37 IST
<div class="paragraphs"><p>ಜಾನ್ ಲ್ಯಾಂಡೊ</p></div>

ಜಾನ್ ಲ್ಯಾಂಡೊ

   

ಚಿತ್ರಕೃಪೆ: @UrsVamsiShekar

ವಾಷಿಂಗ್ಟನ್: ‘ಟೈಟಾನಿಕ್’, ‘ಅವತಾರ್’ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿದ್ದ ನಿರ್ಮಾಪಕ ಜಾನ್ ಲ್ಯಾಂಡೊ ಅವರು ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಡಿಸ್ನಿ ಎಂಟರ್‌ಟೈನ್‌ಮೆಂಟ್ ಸಹ ಅಧ್ಯಕ್ಷ ಅಲನ್ ಬರ್ಗ್‌ಮನ್ ಅವರು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಲ್ಯಾಂಡೊ ಅವರ ನಿಧನವನ್ನು ಖಚಿತಪಡಿಸಿದ್ದಾರೆ. ಸಾವಿಗೆ ಕಾರಣವೇನು ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಜುಲೈ 23, 1960ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ ಲ್ಯಾಂಡೊ, ಚಲನಚಿತ್ರ ನಿರ್ಮಾಪಕರೊಬ್ಬರ ಮಗನಾಗಿದ್ದರು. 1980ರಲ್ಲಿ ಪ್ರೊಡಕ್ಷನ್ ಮ್ಯಾನೇಜರ್‌ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಆ ನಂತರ ನಿರ್ದೇಶಕ ಕ್ಯಾಮರೂನ್ ಅವರ ಜೊತೆಗೂಡಿ ‘ಟೈಟಾನಿಕ್’ ಚಿತ್ರ ನಿರ್ಮಿಸಿದ್ದರು.

ಕ್ಯಾಮರೂನ್ ಮತ್ತು ಲ್ಯಾಂಡೊ ಅವರ ಪಾಲುದಾರಿಕೆಯಲ್ಲಿ ತೆರೆಗೆ ಬಂದ ಮೂರು ಚಿತ್ರಗಳು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶಗೊಂಡಿದ್ದವು. 1997ರಲ್ಲಿ ತೆರೆಕಂಡ ‘ಟೈಟಾನಿಕ್’ ಚಿತ್ರ 11 ಆಸ್ಕರ್ ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿತ್ತು. 2009ರಲ್ಲಿ ಬಿಡುಗಡೆಯಾದ ‘ಅವತಾರ್‌’ ಮತ್ತು ಇತ್ತೀಚೆಗೆ ತೆರೆಕಂಡ ಅದರ ಸೀಕ್ವೆಲ್‌ ‘ಅವತಾರ್: ದಿ ವೇ ಆಫ್‌ ವಾಟರ್’ ಚಿತ್ರಗಳು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು.

‘ನನಗೆ ನಟಿಸಲಾಗಲಿ, ಸಂಯೋಜನೆ ಮಾಡಲಾಗಲಿ ಬರುವುದಿಲ್ಲ. ಅದಕ್ಕಾಗಿ ನಾನು ನಿರ್ಮಾಪಕನಾಗಿದ್ದೇನೆ’ ಎಂದು ಲ್ಯಾಂಡೊ ಪ್ರಶಸ್ತಿ ಸಮಾರಂಭವೊಂದರಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.