ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ನಟ ಸೈಫ್ ಅಲಿ ಖಾನ್ ಇಂದು ತಮ್ಮ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಈ ಸಂದರ್ಭದಲ್ಲಿಕರೀನಾ ಕಪೂರ್ ಖಾನ್ ಪತಿ ಸೈಫ್ರೊಂದಿಗೆ ಇರುವ ಒಂದು ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಗ್ರೀಸ್‌ನಲ್ಲಿ ಒಟ್ಟಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ.
'ಗ್ರೀಸ್ನಲ್ಲೊಂದು ಕಾಲದಲ್ಲಿ..ಒಂದು ಬೌಲ್ ಸೂಪ್ ಮತ್ತು ನಾವು... ಆ ಸಮಯ ನಮ್ಮ ಜೀವನವನ್ನೇ ಬದಲಿಸಿಬಿಟ್ಟಿತು...ಪ್ರಪಂಚದ ಅತ್ಯಂತ ಸುಂದರ ವ್ಯಕ್ತಿಗೆ ವಾರ್ಷಿಕೋತ್ಸವದ ಶುಭಾಶಯಗಳು'ಎಂದು ಕರೀನಾ ಕಪೂರ್ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ಮತ್ತು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
2008ರಲ್ಲಿ ಕರೀನಾ ಮತ್ತು ಸೈಫ್ ’ತಶಾನ್’ ಚಿತ್ರೀಕರಣಕ್ಕಾಗಿ ಗ್ರೀಸ್‌ಗೆ ತೆರಳಿದ್ದರು. ಆ ವೇಳೆ ತೆಗೆದ ಫೋಟೊವನ್ನು ಕರೀನಾ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.