ಮುಂಬೈ: ಭಾರತೀಯ ಸಿನಿಮಾ ರಂಗದಲ್ಲಿ ಬಾಲಿವುಡ್ ಸಿನಿಮಾಗಳ ಯಶಸ್ಸಿಗೆ ಸಲೀಂ–ಜಾವೇದ್ ಅಪಾರ ಕೊಡುಗೆ ನೀಡಿದ್ದಾರೆ. ಇದೀಗ ಅವರ ಸಾಕ್ಷ್ಯಚಿತ್ರವೊಂದು ಬಾಲಿವುಡ್ ಅಂಗಳದಲ್ಲಿ ನಿರ್ಮಾಣಗೊಂಡಿದೆ.
ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಬಗೆಗಿನ ಸಾಕ್ಷ್ಯಚಿತ್ರಕ್ಕೆ ‘ಆ್ಯಂಗ್ರಿ ಯಂಗ್ ಮ್ಯಾನ್’ ಎಂದು ಹೆಸರಿಡಲಾಗಿದೆ. ಇದರಲ್ಲಿ ಹಲವು ದಿಗ್ಗಜ ನಟರ ಸಂದರ್ಶನವಿದೆ. ಅದರಲ್ಲಿ ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಸಂದರ್ಶನವನ್ನೂ ಮಾಡಲಾಗಿದೆ.
ಸದ್ಯ ಬಿಡುಗಡೆಯಾಗಿರುವ ಸಾಕ್ಷ್ಯ ಚಿತ್ರದ ಟ್ರೇಲರ್‌ನಲ್ಲಿ ಯಶ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಹಲವು ನಟರು ಮಾತನಾಡಿರುವ ವಿಡಿಯೊ ತುಣುಕು ಒಳಗೊಂಡಿದೆ.
‘ಇದು ಕೇವಲ ಸಂಭಾಷಣೆಯಲ್ಲ, ಅದೊಂದು ತತ್ವಶಾಸ್ತ್ರವಿದ್ದಂತೆ. ಇಂದಿಗೂ ಜನರ ಬಾಯಲ್ಲಿ ಈ ಡೈಲಾಗ್‌ಗಳು ಹರಿದಾಡುತ್ತಿವೆ’ ಎಂದು ಸಲೀಂ-ಜಾವೇದ್ ಜೋಡಿ ಕುರಿತು ಯಶ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ನನ್ನ ತಂದೆ ಸಲೀಂ ಖಾನ್ ಬಗ್ಗೆ ಮಾತನಾಡುವಾಗ ಇದೇ ಮೊದಲ ಬಾರಿಗೆ ಭಯವಾಗುತ್ತಿದೆ’ ಎಂದಿರುವ ಸಲ್ಮಾನ್ ಖಾನ್, ಅವರ ಕುರಿತು ಬಹಳಷ್ಟು ಭಾವನಾತ್ಮಕ ವಿಷಯಗಳನ್ನು ಹಂಚಿಕೊಂಡಿದ್ದಾರೆ
1970–80ರ ಸಮಯದಲ್ಲಿ ಸಲೀಂ –ಜಾವೇದ್ ಜೋಡಿ ಬಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಶೋಲೆ, ಶಾನ್, ಡಾನ್, ಸೀತಾ ಔರ್ ಗೀತಾ, ದೀವಾರ್ ಸೇರಿದಂತೆ ಹಲವು ಚಿತ್ರಗಳನ್ನು ಇವರು ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.