ADVERTISEMENT

ಇದು ನನ್ನ ಜೀವನದ ಅತ್ಯಂತ ನೋವಿನ ವಾರ: ಕೋವಿಡ್‌ಗೆ ತುತ್ತಾಗಿರುವ ನಟಿ ತ್ರಿಷಾ ಅಳಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 8:28 IST
Last Updated 8 ಜನವರಿ 2022, 8:28 IST
ನಟಿ ತ್ರಿಷಾ
ನಟಿ ತ್ರಿಷಾ   

ವಾರದ ಹಿಂದೆ ಕೋವಿಡ್‌ ಇರುವುದು ಪತ್ತೆಯಾಗಿದ್ದು, ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ನಟಿ ತ್ರಿಷಾ ಕೃಷ್ಣನ್‌ ಅವರು ಶುಕ್ರವಾರ ಬಹಿರಂಗಪಡಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಫೋಸ್ಟ್‌ ಮಾಡಿರುವ ಅವರು, ‘ನನಗೆ ವಾರದ ಹಿಂದೆ ಕೋವಿಡ್‌ ಪಾಸಿಟಿವ್‌ ಇರುವುದು ತಿಳಿಯಿತು. ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಜೀವನದ ಅತ್ಯಂತ ದುಃಖಕರ ವಾರಗಳಲ್ಲಿ ಒಂದಾಗಿದೆ’ ಎಂದು ಹೇಳಿದ್ದಾರೆ.

‘ಎಲ್ಲಾ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ, ನನಗೆ ಕೋವಿಡ್‌ ಸೋಂಕು ತಗುಲಿದೆ. ನೀವು ರೋಗಲಕ್ಷಣವನ್ನು ಹೆಸರಿಸಿ, ಅದನ್ನು ನಾನು ಹೊಂದಿದ್ದೇನೆ’ ಎಂದೂ ತ್ರಿಷಾ ತಿಳಿಸಿದ್ದಾರೆ.

ADVERTISEMENT

‘ನಾನು ಆಸ್ಪತ್ರೆಯಿಂದ ಶೀಘ್ರದಲ್ಲೇ ಮನೆಗೆ ಮರಳಲು ಆಶಿಸುತ್ತೇನೆ. ಕುಟುಂಬ ಹಾಗೂ ಸ್ನೇಹಿತರ ಪ್ರಾರ್ಥನೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.