ADVERTISEMENT

ತ್ರಿಷಾ ಜನ್ಮದಿನ: 39ನೇ ವರ್ಷದ ಸಂಭ್ರಮದಲ್ಲಿ ‘ಕೃಷ್ಣ ಸುಂದರಿ‘

​ಪ್ರಜಾವಾಣಿ ವಾರ್ತೆ
Published 4 ಮೇ 2022, 12:47 IST
Last Updated 4 ಮೇ 2022, 12:47 IST
ತ್ರಿಷಾ
ತ್ರಿಷಾ   

ಬೆಂಗಳೂರು: ತ್ರಿಷಾ ಕೃಷ್ಣನ್‌ ಇಂದು (ಮೇ 4) 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರ ಜತೆಯಲ್ಲಿ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

ತ್ರಿಷಾಗೆ ಅಭಿಮಾನಿಗಳು ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಹಾಗೂ ಕನ್ನಡ ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ತ್ರಿಷಾ, ಪುನೀತ್ ರಾಜ್‌ಕುಮಾರ್‌ ಜೊತೆ ’ಪವರ್ ’ ಸಿನಿಮಾದಲ್ಲಿ ನಟಿಸಿದ್ದರು. ಅವರಿಗೆ ಸ್ಯಾಂಡಲ್‌ವುಡ್‌ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ನಟಿ ಖುಷ್ಬೂ ಸುಂದರ್‌, ರಾಧಿಕಾ ಶರತ್‌ ಕುಮಾರ್‌ ಸೇರಿದಂತೆ ಹಲವರು ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ADVERTISEMENT

ತ್ರಿಷಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕಗಳು ಕಳೆದರೂ ಈಗಲೂ ಅದೇ ಚಾರ್ಮ್ ಉಳಿಸಿಕೊಂಡು ಬೇಡಿಕೆಯ ನಟಿಯಾಗಿದ್ದಾರೆ.

ತ್ರಿಷಾ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸೆಪ್ಟೆಂಬರ್‌ 30ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.