ADVERTISEMENT

ಅಂತೂ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಉಪೇಂದ್ರ

ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಅಂತೂ ಘೋಷಣೆಯಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2024, 6:05 IST
Last Updated 14 ಅಕ್ಟೋಬರ್ 2024, 6:05 IST
<div class="paragraphs"><p>‘ಯುಐ’ ಸಿನಿಮಾ</p></div>

‘ಯುಐ’ ಸಿನಿಮಾ

   

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಅಂತೂ ಘೋಷಣೆಯಾಗಿದೆ.

‘ಯುಐ’ ಸಿನಿಮಾ ಇದೇ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಘೋಷಿಸಿದ್ದಾರೆ. ಎಂಟು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.  

ADVERTISEMENT

ಉಪೇಂದ್ರ ಅವರು ಈ ಚಿತ್ರದಲ್ಲಿ ನಾಯಕ ನಟನ ಪಾತ್ರ ನಿರ್ವಹಿಸಿದ್ದಾರೆ. ಈ ಮೊದಲು ‘ಯುಐ’ ಚಿತ್ರ ಏಪ್ರಿಲ್‌ನಲ್ಲಿಯೇ ತೆರೆಗೆ ಬರಬೇಕಿತ್ತು. ಗ್ರಾಫಿಕ್ಸ್‌ ಕೆಲಸದಿಂದ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ನಂತರ ಗೌರಿ–ಗಣೇಶ ಹಬ್ಬಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು. ಅದೂ ಮುಂದಕ್ಕೆ ಹೋಯಿತು. ಅಕ್ಟೋಬರ್‌ನಲ್ಲಿ ಬರುತ್ತೆ ಎಂದು ಹೇಳಿದ್ದರು. ಇದೀಗ ವರ್ಷಾಂತ್ಯಕ್ಕೆ ಯುಐ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಆ.15ಕ್ಕೆ ಶಿವರಾಜ್‌ಕುಮಾರ್‌ ನಟನೆಯ ‘ಭೈರತಿ ರಣಗಲ್‌’ ಬಿಡುಗಡೆಯಾಗುತ್ತಿದೆ.

ಪೋಸ್ಟರ್ ಜೊತೆ ಉಪೇಂದ್ರ ಅವರು ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ...? ಎಂದು ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಹಿಂದೊಮ್ಮೆ ಸಂದರ್ಶನದಲ್ಲಿ ಉಪೇಂದ್ರ ಅವರು, ಈ ಸಿನಿಮಾ ಮಾಡಿರುವುದೇ ಪ್ರೇಕ್ಷಕರು ಮಾತನಾಡಬೇಕು ಎಂದು. ‘ಯು’ ಎನ್ನುವುದು ‘ಐ’ ಆಗಬೇಕು. ಎಂದರೆ ‘ನೀವೆಲ್ಲರೂ ನಾನು ಆಗಬೇಕು’ ಅದೇ ಸಿನಿಮಾ’’ ಎಂದು ಹೇಳಿದ್ದರು.

‘ನಾನು’ ಮತ್ತು ‘ನೀನು’ ಎಂಬ ಅರ್ಥ ನೀಡುವ ಶೀರ್ಷಿಕೆ ಹೊಂದಿರುವ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಅಜನೀಶ್ ಲೋಕನಾಥ್‌ ಸಂಗೀತವಿದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಚಿತ್ರವಿದು. ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​  ಬಂಡವಾಳ ಹೂಡಿದ್ದಾರೆ.

ನಟರಾದ ಉಪೇಂದ್ರ, ರವಿಶಂಕರ್‌, ಅಚ್ಯುತ್‌ಕುಮಾರ್‌, ಸಾಧುಕೋಕಿಲ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.