ADVERTISEMENT

ಮತ್ತೆ‌ ಆ್ಯಕ್ಷನ್‌ ಕಟ್: 'ಐ ಲವ್ ಯು' ತೆಲುಗು ಟ್ರೇಲರ್‌ ಬಿಡುಗಡೆ ವೇಳೆ ಉಪ್ಪಿ

ವಿಶಾಖಪಟ್ಟಣಂ: ತೆಲುಗು ಅವತರಣಿಕೆಯ ಟ್ರೇಲರ್, ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಮನದಾಸೆ

ಕೆ.ಎಚ್.ಓಬಳೇಶ್
Published 9 ಜೂನ್ 2019, 8:07 IST
Last Updated 9 ಜೂನ್ 2019, 8:07 IST
ನಟ ಉಪೇಂದ್ರ ಮತ್ತು ನಟಿ ರಚಿತಾ ರಾಮ್‌ ನಟನೆಯ ‘ಐ ಲವ್‌ ಯು’ ಚಿತ್ರದ ದೃಶ್ಯ.
ನಟ ಉಪೇಂದ್ರ ಮತ್ತು ನಟಿ ರಚಿತಾ ರಾಮ್‌ ನಟನೆಯ ‘ಐ ಲವ್‌ ಯು’ ಚಿತ್ರದ ದೃಶ್ಯ.   

ವಿಶಾಖಪಟ್ಟಣಂ:'ಸಿನಿಮಾ ನಿರ್ದೇಶನ ಮಾಡುವುದೆಂದರೆ ನನಗೆ ಹೆಚ್ಚು ಖುಷಿ. ಮತ್ತೆ ನಾನು ಆ್ಯಕ್ಷನ್ ಕಟ್ ಹೇಳುತ್ತೇನೆ. ಕನ್ನಡ ಮತ್ತು ತೆಲುಗಿನಲ್ಲಿ‌ ಸಿನಿಮಾ ನಿರ್ದೇಶನ‌ ಮಾಡುವುದು ಖಚಿತ' ಎಂದು ನಟ ಉಪೇಂದ್ರ ಹೇಳಿದರು.

ಇಲ್ಲಿನ ವರುಣ್ ಬೀಚ್ ನಲ್ಲಿ ಶನಿವಾರ ರಾತ್ರಿ ನಡೆದ ಆರ್. ಚಂದ್ರು‌ ನಿರ್ದೇಶನದ 'ಐ ಲವ್ ಯು' ಚಿತ್ರದ ತೆಲುಗು ಅವತರಣಿಕೆಯ ಟ್ರೇಲರ್ ಮತ್ತು ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಅವರು ಮಾಡಿದರು.

'ನಟಿ ರಚಿತಾ ರಾಮ್ ಈ ಚಿತ್ರದಲ್ಲಿ ಎರಾಟಿಕ್ ದೃಶ್ಯಗಳಲ್ಲಿ ಕಾಣಿಕೊಂಡಿದ್ದಾರೆ.‌ ಇದು ಅಶ್ಲೀಲತೆ ಅಲ್ಲ. ಪಾತ್ರಕ್ಕೆ ತಕ್ಕಂತೆ ಅವರು ‌ನಟಿಸಿದ್ದಾರೆ. ಅವರೂ ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ' ಎಂದರು.

'ಚಂದ್ರು ನನಗೆ ಕಥೆಯ ಒಂದು ಎಳೆ‌ ಹೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ. ಭಾವುಕ ಸನ್ನಿವೇಶಗಳೇ ಈ ಚಿತ್ರದ‌ ಜೀವಾಳ. ನಿರ್ದೇಶಕರು ಅದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ‌‌. ಸಿನಿಮಾದಲ್ಲಿ ಕಮರ್ಷಿಯಲ್ ಅಂಶವೂ ಇದೆ ಎಂದು ಹೇಳಿದರು.

ಚಿತ್ರದ ಮೊದಲ ಭಾಗ ಯುವಜನರಿಗೆ‌ ಮೀಸಲು. ದ್ವಿತೀಯಾರ್ಧವನ್ನು ಕೌಟುಂಬಿಕ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ.‌ ಕ್ಲೈಮ್ಯಾಕ್ಸ್ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

'ಐ ಲವ್ ಯು' ಚಿತ್ರದ ತೆಲುಗು ಅವತರಣಿಕೆಯ ಟ್ರೇಲರ್ ಮತ್ತು ಆಡಿಯೊ ಬಿಡುಗಡೆ ಸಮಾರಂಭದಲ್ಲಿ ನಟ ಉಪೇಂದ್ರ

ನಿರ್ದೇಶಕ ಆರ್. ಚಂದ್ರು ಮಾತನಾಡಿ, 'ಉಪೇಂದ್ರ ಅವರು ನಿರ್ದೇಶಿಸಿದ 'A' ಸಿನಿಮಾದಂತೆ ನಾನು ಚಿತ್ರ ಮಾಡಲಾರೆ. ಅದನ್ನು ಮರುಸೃಷ್ಟಿಸುವುದು ಕಷ್ಟಸಾಧ್ಯ. ಆದರೆ, 'A' ಚಿತ್ರದ ಕ್ಯಾರೆಕ್ಟರ್ ಇದರಲ್ಲಿದೆ. ನಾನು‌ ಈ‌ ಹಿಂದೆ ನಿರ್ದೇಶಿಸಿದ 'ಚಾರ್ ಮಿನರ್ ' ಚಿತ್ರದ ಕಥೆ ಇದೆ ಎಂದರು.

ಎಲ್ಲರಲ್ಲೂ ಪ್ರೀತಿ ಇರುತ್ತದೆ. ಅದು ಹೇಗೆ ಅರಳುತ್ತದೆ ಎನ್ನುವುದು ಮುಖ್ಯ. ಚಿತ್ರದಲ್ಲಿ ನಿಜವಾದ ಪ್ರೀತಿಯ ಬಗ್ಗೆ ಹೇಳಿದ್ದೇವೆ. ಎಲ್ಲ ವರ್ಗದ‌ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದಲ್ಲಿ ಎರಡು ದಶಕದ ಹಿಂದೆಯೇ ಉಪ್ಪಿ ಸರ್ ಹಲವು‌ ಪ್ರಯೋಗಗಳಿಗೆ ನಾಂದಿ ಹಾಡಿದ್ದಾರೆ. ತೆಲುಗಿನ ಈಗಿನ‌ ಹೊಸ ಟ್ರೆಂಡ್ ಅನ್ನು ಈ ಹಿಂದೆಯೇ ಅವರು ಕನ್ನಡದಲ್ಲಿ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ ಎಂದರು.

ತೆಲುಗಿನ 'ರಂಗಸ್ಥಲಂ' ಮತ್ತು ಸರೈನೋಡು' ಚಿತ್ರದ ಬಳಿಕ ವರುಣ್ ಕಡಲತೀರದಲ್ಲಿ 'ಐ ಲವ್ ಯು' ಚಿತ್ರದಮತ್ತು ಆಡಿಯೊ‌ ಬಿಡುಗಡೆಗೆ ಅವಕಾಶ‌‌‌ ಕಲ್ಪಿಸಲಾಗಿಯ್ತು. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಜೂನ್ 14ರಂದು ಈ ಚಿತ್ರ ಒಂದು ಸಾವಿರ ಚಿತ್ರಮಂದಿರಗಳಲ್ಲಿ‌ ತೆರೆಕಾಣುತ್ತಿದೆ. 'ಕೆಜಿಎಫ್' ಚಿತ್ರದ ಬಳಿಕ ಅತಿಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಚಿತ್ರ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.