ADVERTISEMENT

ಡಿವೋರ್ಸ್ ವದಂತಿ: ಇನಿಯನನ್ನು Unfollow ಮಾಡಿದ ರಂಗೀಲಾ ಬೆಡಗಿ ಊರ್ಮಿಳಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2024, 15:03 IST
Last Updated 25 ಸೆಪ್ಟೆಂಬರ್ 2024, 15:03 IST
<div class="paragraphs"><p>ಊರ್ಮಿಳಾ</p></div>

ಊರ್ಮಿಳಾ

   

ಮುಂಬೈ: ರಂಗೀಲಾ ಖ್ಯಾತಿಯ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮೊಹ್ಸಿನ್ ಅಖ್ತರ್ ಅವರು ಪರಸ್ಪರ ಒಪ್ಪಿಗೆ ಮೇರೆಗೆ 8 ವರ್ಷಗಳ ದಾಂಪತ್ಯ ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆಯೇ ಇಂದು ಊರ್ಮಿಳಾ ಮಾತೋಂಡ್ಕರ್ ಅವರು ಇನ್‌ಸ್ಟಾಗ್ರಾಂನಲ್ಲಿ ಮೊಹ್ಸಿನ್ ಅಖ್ತರ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಊರ್ಮಿ ಅಭಿಮಾನಿಗಳು ಇದು ಪರಸ್ಪರ ಒಪ್ಪಿಗೆ ಮೇರೆಗೆ ನಡೆಯುತ್ತಿರುವ ಡಿವೋರ್ಸ್ ಅಲ್ಲ. ಏನೋ ಆಗಿದೆ ಎಂದು ಚರ್ಚಿಸುತ್ತಿದ್ದಾರೆ. ರಾಜಕೀಯದಲ್ಲಿ ನೆಲೆಯೂರಲು ಯತ್ನಿಸುತ್ತಿರುವ ಊರ್ಮಿಳಾಗೆ ಮನೆ ಕಡೆಯಿಂದ ಬೆಂಬಲ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ಊರ್ಮಿಳಾ ಅವರು ರಾಜಕೀಯ ಕ್ಷೇತ್ರದಲ್ಲಿ (ಶಿವಸೇನಾ) ತೊಡಗಿಸಿಕೊಂಡಿದ್ದಾರೆ. 2023ರಲ್ಲಿ ಜಮ್ಮುವಿನಲ್ಲಿ ನಡೆದ ಭಾರತ್‌ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಊರ್ಮಿಳಾ ಮಾತೋಂಡ್ಕರ್‌ ಹೆಜ್ಜೆ ಹಾಕಿದ್ದರು.

ಊರ್ಮಿಳಾ ಅವರು ‘ದಿಲ್ಲಗಿ’, ‘ಖೂಬ್‌ಸೂರತ್’, ‘ಓಂ ಜೈ ಜಗದೀಶ್’, ‘ಜುದಾಯಿ’ ಮುಂತಾದ ಚಿತ್ರಗಳಲ್ಲಿ ಗಮನ ಸೆಳೆದಿದ್ದರು..

2016ರ ಫೆಬ್ರುವರಿ 4ರಂದು ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರಿ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅವರನ್ನು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ಮಾತೋಂಡ್ಕರ್ ಅವರು ತನಗಿಂತ 10 ವರ್ಷ ಕಿರಿಯ, ಮುಸ್ಲಿಂ ಯುವಕನೊಂದಿಗೆ ಅಂತರ್ ಧರ್ಮೀಯ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಆದರೆ, ಇದೀಗ ಅವರಿಬ್ಬರು ವಿಚ್ಛೇದನ ಪಡೆಯುತ್ತಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. 2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಮುಂಬೈ ಉತ್ತರ ಕ್ಷೇತ್ರದಿಂದ ಊರ್ಮಿಳಾ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಗೋಪಾಲ್‌ ಶೆಟ್ಟಿ ವಿರುದ್ಧ ಸೋಲು ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.