ADVERTISEMENT

ಮತ್ತೆ ತೆರೆ ಮೇಲೆ ಊರ್ವಶಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
Urvasi
Urvasi   

ಬಹುಭಾಷಾ ನಟಿ ಊರ್ವಶಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಕೇಳಿಬರುತ್ತಿದೆ.

ನಟ ಸೂರ್ಯ ಅಭಿನಯದ ಸಿನಿಮಾವೊಂದರಲ್ಲಿ ಅವರು ಅಭಿನಯಿಸಲಿದ್ದಾರೆ. ಈಗಾಗಲೇ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿರುವ ಈ ಸಿನಿಮಾ ತಂಡ ಕೆಲವು ಭಾಗದ ಶೂಟಿಂಗ್ ಮಾತ್ರ ಪೂರ್ಣಗೊಳಿಸಿದೆ.

ಸುಧಾ ಕೊಂಗರಾ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಉಳಿದ ಭಾಗದ ಶೂಟಿಂಗ್‌ಗಾಗಿ ಊರ್ವಶಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ.

ADVERTISEMENT

ಸೂರ್ಯ ಅವರೊಂದಿಗೆ ಅಪರ್ಣಾ, ಮೋಹನ್‌ ಬಾಬು, ಜಾಕಿ ಶ್ರಾಫ್‌, ಪರೇಶ್‌ ರಾವಲ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜಿ.ವಿ.ಪ್ರಕಾಶ್‌ ಕುಮಾರ್ ಅವರ ಸಂಗೀತ ಹಾಗೂ ನಿಕೇತ್‌ ಬೊಮ್ಮಿರೆಡ್ಡಿ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ.

ಕೆಲವೊಂದು ಆ್ಯಕ್ಷನ್‌ ದೃಶ್ಯಗಳನ್ನು ಚಂಡೀಗಡದಲ್ಲಿ ಈಗಾಗಲೇ ಶೂಟಿಂಗ್ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಟಂಟ್‌ ಮಾಸ್ಟರ್‌ ಗ್ರೆಗ್‌ ಪೊವೆಲ್‌ ಕೂಡ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.