ADVERTISEMENT

ಮಲಯಾಳಂ ನಟ ಮೋಹನ್ ರಾಜ್ ನಿಧನ

‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನ ಖಳನಟನಾಗಿ ಮಿಂಚಿದ್ದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2024, 6:11 IST
Last Updated 5 ಅಕ್ಟೋಬರ್ 2024, 6:11 IST
<div class="paragraphs"><p>ಮೋಹನ್ ರಾಜ್</p></div>

ಮೋಹನ್ ರಾಜ್

   

ಬೆಂಗಳೂರು: ಮಲಯಾಳಂ ನಟ ಮೋಹನ್ ರಾಜ್ (69) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ಶುಕ್ರವಾರ ನಿಧನರಾದರು ಎಂದು ವರದಿಗಳು ತಿಳಿಸಿವೆ.

1988 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಮೋಹನ್ ರಾಜ್ ಅವರು 1989 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನ ಖಳನಟನಾಗಿ ಮಿಂಚಿದ್ದರು.

ADVERTISEMENT

‘ಕಿರೀಡಂ’ ಸಿನಿಮಾ ಕನ್ನಡಲ್ಲಿ ‘ಮೋಡದ ಮರೆಯಲ್ಲಿ’ ಎಂಬ ಹೆಸರಿನಿಂದ ರಿಮೇಕ್ ಆಗಿ 1991 ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್–ಯಮುನಾ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ‘ಜೀವ ನೀನು, ದೇಹ ನಾನು’ ಚಿತ್ರಗೀತೆ ಸಾಕಷ್ಟು ಜನಪ್ರಿಯವಾಗಿದೆ.

ಮೋಹನ್ ರಾಜ್ ಅವರ ನಿಧನಕ್ಕೆ ಸಿ.ಎಂ ಪಿಣರಾಯಿ ವಿಜಯನ್, ನಟರಾದ ಮೋಹನ್ ಲಾಲ್, ಮುಮ್ಮುಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಲಯಾಳಂ ಸೇರಿದಂತೆ ತೆಲುಗು, ತಮಿಳಿನ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ರಾಜ್ ನಟಿಸಿದ್ದರು. ಖಳನಟರಾಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದರು.

1955 ರಲ್ಲಿ ತಿರುವನಂತಪುರದಲ್ಲಿ ಜನಿಸಿದ್ದ ಮೋಹನ್ ರಾಜ್ ಭಾರತೀಯ ಸೇನೆ ಸೇರಿದ್ದರು. ಗಾಯದಿಂದ ಕೆಲ ವರ್ಷಗಳ ಬಳಿಕ ಸೇನೆ ತೊರೆದು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.

2024 ರಲ್ಲಿ ಮುಮ್ಮುಟ್ಟಿ ಅಭಿನಯದ Rorschach ಸಿನಿಮಾ ಇವರು ಅಭಿನಯಿಸಿದ್ದ ಕಡೆಯ ಸಿನಿಮಾವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.