ADVERTISEMENT

ಹಿರಿಯ ತಮಿಳು ನಟ ದೆಹಲಿ ಗಣೇಶ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 5:49 IST
Last Updated 10 ನವೆಂಬರ್ 2024, 5:49 IST
<div class="paragraphs"><p>ದೆಹಲಿ ಗಣೇಶ್</p></div>

ದೆಹಲಿ ಗಣೇಶ್

   

ಚೆನ್ನೈ: ಹಿರಿಯ ತಮಿಳು ನಟ ದೆಹಲಿ ಗಣೇಶ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ADVERTISEMENT

1944 ರಲ್ಲಿ ತಿರುನಲ್ವೇಲಿ ಜಿಲ್ಲೆಯಲ್ಲಿ ಜನಿಸಿದ್ದ ಅವರು ತಮಿಳಿನ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅನೇಕ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.

‘ದೆಹಲಿಯ ದಕ್ಷಿಣ ಭಾರತ್ ನಾಟಕ ಸಭಾ’ದಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ವಾಯುಸೇನೆಯ ಹುದ್ದೆ ತೊರೆದು ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದರು. ನಿರ್ದೇಶಕ ಕೆ. ಬಾಲಚಂದರ್ ಅವರು ಗಣೇಶ್ ಅವರಿಗೆ ‘ದೆಹಲಿ ಗಣೇಶ್’ ಎಂದು ನಾಮಕರಣ ಮಾಡಿದ್ದರು.

ದೆಹಲಿ ಗಣೇಶ್ ಅವರು 1976 ರಲ್ಲಿ ಪಟ್ಟಿನಂ ಪ್ರವೇಶಂ ಮೂಲಕ ಸಿನಿಮಾ ಪ್ರವೇಶ ಮಾಡಿದ್ದರು. ಇಂಡಿಯನ್–2 ಸಿನಿಮಾ ಅವರು ಅಭಿನಯಿಸಿದ ಕೊನೆಯ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.