ನಿರ್ದೇಶಕ ವೆಟ್ರಿಮಾರನ್ ಅವರ ಮುಂದಿನ ಹೊಸ ಚಿತ್ರದಲ್ಲಿ ನಟ ವಿಕ್ರಮ್ ಹಾಗೂ ಅವರ ಮಗ ಧ್ರುವ ಇಬ್ಬರೂ ಬಣ್ಣ ಹಚ್ಚುತ್ತಿರುವುದು ವಿಶೇಷ.
ಇತ್ತೀಚೆಗೆ ಬಿಡುಗಡೆಯಾದ ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತ್ತು. ಈಗ ಈ ಹೊಸ ಚಿತ್ರದಲ್ಲಿ ಅಪ್ಪ– ಮಗ ನಟಿಸುತ್ತಿರುವುದು ಮತ್ತು ಚಿತ್ರದ ಕತೆ ಬಗ್ಗೆ ಕುತೂಹಲ ಮೂಡಿಸಿದೆ. ಆದರೆ ಈ ಚಿತ್ರದ ಬಗ್ಗೆ ವೆಟ್ರಿಮಾರನ್ ಅಥವಾ ವಿಕ್ರಮ್ ಇಲ್ಲಿಯವರೆಗೂ ಏನನ್ನೂ ಹೇಳಿಲ್ಲ. ಈ ಚಿತ್ರಕ್ಕೆ ನಿರ್ಮಾಪಕ ಮುಕೇಶ್ ರತಿಲಾಲ್ ಮೆಹ್ತಾ ಅವರು ಬಂಡವಾಳ ಹೂಡಲಿದ್ದಾರೆ.
ಇದನ್ನೂ ಓದಿ:'ಅಸುರನ್' ದಮನಿತರ ಪ್ರತಿರೋಧದ ಧ್ವನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.