ಬೆಂಗಳೂರು:‘ಮಕ್ಕಳ ಬಾಲ್ಯವನ್ನು ಕಸಿಯಬೇಡಿ, ಮಕ್ಕಳ ಮೇಲೆ ಒತ್ತಡ ಹೇರಬೇಡಿ’ ಈ ಸಂದೇಶವಿಟ್ಟುಕೊಂಡು ನಿರ್ಮಿಸಿರುವ ಮಕ್ಕಳ ಸಿನಿಮಾ ‘ವಿರೂಪಾ’ ಇದೇ 12ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಡುಬೋಯ್ಸ್‌ಪ್ರೊಡಕ್ಷನ್‌ನಲ್ಲಿ ಡ್ಯಾಫ್ನಿ ನೀತು ಡಿಸೋಜ ಈ ಸಿನಿಮಾನಿರ್ಮಿಸಿದ್ದು, ಕಥೆ, ಚಿತ್ರಕಥೆ ಮತ್ತು ನಿರ್ದೇಶನಪುನೀಕ್ ಶೆಟ್ಟಿ ಅವರದ್ದು.
ವಿನ್ಸೆಂಟ್, ರುಸ್ತುಂ ಹಾಗೂ ಪಾಕ್ಷ ಎಂಬ ಮೂವರು ಮಕ್ಕಳ ಹೆಸರನ್ನು ಕೂಡಿಸಿ ಸಿನಿಮಾಕ್ಕೆ ‘ವಿರೂಪಾ’ ಹೆಸರಿಡಲಾಗಿದೆ.ಇದೊಂದು ವಿಭಿನ್ನ ಕಥೆಯ ಸಿನಿಮಾ ಆಗಿದ್ದು, ಏಲ್ಲೋ ಓದುತ್ತಾ, ಆಟವಾಡಿಕೊಂಡಿದ್ದ ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಅದರಲ್ಲೂ ಒಬ್ಬ ಬಾಲಕ ಹುಟ್ಟು ಅಂಧ, ಮತ್ತೊಬ್ಬನಿಗೆ ಮಾತು ಬಾರದು.ಆದರೆ ಅವರಿಬ್ಬರಿಗೆ ಪ್ರತಿಭೆಗೆ ಕಿಂಚಿತ್ತೂ ಕೊರತೆ ಇರಲಿಲ್ಲ. ಕಾರಣ ವಿರುಪಾ ಚಿತ್ರವನ್ನು ವಿಭಿನ್ನ ಹಾದಿಯಲ್ಲಿ ಕೊಂಡೊಯ್ದ ಮಕ್ಕಳನ್ನೇ ಹಿರೋ, ಹಿರೋಯಿನ್ ಎನ್ನಬೇಕು. ಐತಿಹಾಸಿಕ ಸ್ಥಳ ಹಂಪಿಯಲ್ಲೇ ಚಿತ್ರದ ಚಿತ್ರೀಕರಣವಾಗಿದ್ದು, ಆಸುಪಾಸಿನ ಮಕ್ಕಳೇ ಈ ಚಿತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರದಲ್ಲಿ 2 ಹಾಡುಗಳಿದ್ದು ಸಿದ್ದು ಒಡೆಯರ್ ಸಾಹಿತ್ಯದಲ್ಲಿ ಮೂಡಿಬಂದಿವೆ. ಹಂಪಿಯ ಸುಂದರ ತಾಣವನ್ನು ಅನಂತರಾಜ್ ಅರಸ್ ಕ್ಯಾಮೆರಾ ಕೈಚಳಕದಲ್ಲಿ ಅಂದವಾಗಿ ಸೆರೆ ಹಿಡಿದಿದ್ದಾರೆ ಎಂದು ನಿರ್ದೇಶಕ ಪುನೀಕ್ ಶೆಟ್ಟಿ, ಸುದ್ದಿಗೋಷ್ಠಿಯಲ್ಲಿ ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.
‘ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ಬಹಳ ಆಸಕ್ತಿ ಇತ್ತು. ಅಭಿನಯದ ಅವಕಾಶ ಸಿಗಲಿಲ್ಲ. ಆದರೆ, ಸಿನಿಮಾ ನಿರ್ಮಾಣ ಅವಕಾಶ ಸಿಕ್ಕಿತು. ನಿರ್ದೇಶಕ ಪುನೀಕ್ ಹೇಳಿದ ಕಥೆ ತುಂಬಾ ಇಷ್ಟವಾಯಿತು. ನನ್ನ ಪತಿ ಮತ್ತು ಸಹೋದರ ಇಬ್ಬರೂ ನನ್ನ ಈ ಮೊದಲ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ’ ಎಂದರು ನಿರ್ಮಾಪಕಿ ಡ್ಯಾಫ್ನಿ ನೀತು ಡಿಸೋಜ.
‘ಈ ಸಿನಿಮಾದಲ್ಲಿ ನಟಿಸಿರುವ ನಾವೆಲ್ಲರೂ ಬಡಮಕ್ಕಳು. ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹಿಸಬೇಕು’ ಎಂದು ಬಾಲನಟರಾದ ಹೊಸಪೇಟೆಯ ವಿಷ್ಣು, ಭಟ್ಕಳದ ಶಾಯಲ್‌ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.