ನಿದ್ರೆ ಮಾತ್ರೆ ಸೇವಿಸಿಆತ್ಮಹತ್ಯೆಗೆ ಯತ್ನಿಸಿದ್ದ‘ನಾಗಮಂಡಲ’ ಸಿನಿಮಾ ಖ್ಯಾತಿಯನಟಿವಿಜಯಲಕ್ಷ್ಮಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದಲೇ ಮತ್ತೊಂದು ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಸಾಯಲು ಬಯಸಿದ್ದೆ, ಇದು ನಾಟಕವಲ್ಲ’ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಕರ್ನಾಟಕ ಮೂಲದ ಬಹುಭಾಷಾ ನಟಿಯಾದ ವಿಜಯಲಕ್ಷ್ಮಿ, ‘ನಾನು ಸದ್ಯ ಆರಾಮಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ನನ್ನನ್ನು ಕಾಪಾಡಿದೆ. ನಾನು ಸಾಯುತ್ತಿರುವಾಗಲೂ ಇದನ್ನು ರಾಜಕೀಯಗೊಳಿಸಲಾಯಿತು. ಸೀಮಾನ್‌ನಂತಹ ಜನರು ಇದನ್ನೆಲ್ಲ ಹೇಗೆ ಮಾಡುತ್ತಾರೆಂದು ನನಗೆ ತಿಳಿಯದು. ನಾನು ಸಾಯಲು ಗಂಭೀರವಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದೆ. ಈಗ ನಾನು ಚೆನ್ನಾಗಿರುವೆ.ನನ್ನ ಹಿತೈಷಿಗಳಿಗೆ ಧನ್ಯವಾದಗಳನ್ನು ಹೇಳುವೆ. ನನ್ನನ್ನು ನಿರ್ದಿಷ್ಟ ಪಕ್ಷದ ಕಾರ್ಯಕರ್ತೆ ಎನ್ನುವುದನ್ನು ನಿಲ್ಲಿಸಿ. ಇದು ತುಂಬಾ ಕೆಟ್ಟದು. ಹೆಚ್ಚು ಮನುಷ್ಯತ್ವದಿಂದ ಇರಲು ಪ್ರಯತ್ನಿಸಿ. ನಾನು ಯಾವುದೇ ನಾಟಕ ಮಾಡುತ್ತಿಲ್ಲ. ನನಗೆ ವಾಂತಿಯಾಗುತ್ತಿದ್ದು, ಆಹಾರ ಸೇವಿಸುತ್ತಿಲ್ಲ. ಹೃದಯ ಬಡಿತ ಮತ್ತು ರಕ್ತದೊತ್ತಡ ಬದಲಾಗುತ್ತಿದೆ. ನಾನು ತುಂಬಾ ಕಷ್ಟಪಡುತ್ತಿರುವೆ. ನಾನು ಯಾರದೋ ಆದೇಶದ ಅನುಸಾರ ಈ ರೀತಿ ಮಾಡಲಿಲ್ಲ. ನಿಜವಾಗಿಯೂ ಬೇಸರಗೊಂಡು ಇಂತಹ ನಿರ್ಧಾರಕ್ಕೆ ಬಂದೆ. ಸೀಮಾನ್‌ನಿಂದಾಗಿ ತುಂಬಾ ಅನಾರೋಗ್ಯದಿಂದ ಬಳಲುತ್ತಿರುವೆ. ಆತ ಮನುಷ್ಯನೋ ಅಥವಾ ಮೃಗವೋ ನನಗೆ ತಿಳಿಯದು. ಇದನ್ನು ರಾಜಕೀಯಗೊಳಿಸಬೇಡಿ. ದಯವಿಟ್ಟುಕೆಟ್ಟದ್ದನ್ನು ಬರೆಯಬೇಡಿ. ನಾನು ಕೀಳುಮಟ್ಟದ ವ್ಯಕ್ತಿಯಲ್ಲ. ನಾನು ಈಗಾಗಲೇ ತುಂಬಾ ಕಷ್ಟಪಡುತ್ತಿರುವೆ. ದಯವಿಟ್ಟು ಕೆಟ್ಟ ವಿಷಯಗಳನ್ನು ಬರೆಯಬೇಡಿ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುವೆ. ನಾನು ಶೀಘ್ರದಲ್ಲೇ ನಿಮ್ಮಲ್ಲಿಗೆ ಮರಳುವೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಕಿರುಕುಳಕ್ಕೆ ಒಳಗಾದ ನಟಿಗೆ ನ್ಯಾಯ ಕೊಡಿಸಲು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೂ ಶುರು ಮಾಡಿದ್ದಾರೆ. ಹೋರಾಟಗಾರ್ತಿ ಕಸ್ತೂರಿ ಶಂಕರ್, ವಿಜಯಲಕ್ಷ್ಮಿ ಕುಟುಂಬವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದು, ಎಲ್ಲ ರೀತಿಯ ನೆರವು ಒದಗಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಮತ್ತು ಅವರ ಸಹೋದರಿಯರ ಸದ್ಯದ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕ ಮೂಲದವಳು ಎಂಬ ಕಾರಣಕ್ಕೆ ಮತ್ತು ಜಾತಿಯ ಕಾರಣಕ್ಕೆ ನನ್ನನ್ನು ಕೀಳಾಗಿ ಕಾಣಲಾಗುತ್ತಿತ್ತು. ಇದು ನನ್ನ ಕೊನೆಯ ವಿಡಿಯೊ. ತಮಿಳುನಾಡಿನ ರಾಜಕೀಯ ಪಕ್ಷ 'ನಾಮ್ ತಮಿಳರ್ ಕಚ್ಚಿ’ (ಎನ್‌ಟಿಕೆ) ಜೊತೆಗೆ ಗುರುತಿಸಿಕೊಂಡಿರುವ ಸೀಮಾನ್, ‘ಪನನ್‌ಕಟ್ಟು ಪಾಡೈ ಕಚ್ಚಿ’ಯ ಹರಿ ನಾಡರ್ ಅವರು ಕಿರುಕುಳ ನೀಡಿದ್ದಾರೆ.ನನ್ನ ಸಾವಿಗೆಈ ಇಬ್ಬರು ಕಾರಣ’ ಎಂದು ವಿಜಯಲಕ್ಷ್ಮಿ ಆರೋಪಿಸಿ ಭಾನುವಾರವಿಡಿಯೊ ಮಾಡಿ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.
ವಿಜಯಲಕ್ಷ್ಮಿ ಆತ್ಮಹತ್ಯೆ ಪ್ರಕರಣ ಸಾಮಾಜಿಕ ಜಾಲತಾಣದಲ್ಲೂವ್ಯಾಪಕ ಚರ್ಚೆ ಹುಟ್ಟು ಹಾಕಿದೆ. #Vijayalakshmi ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ವಿಜಯಲಕ್ಷ್ಮಿ ಅವರಿಗೆ ನ್ಯಾಯಕೊಡಿಸಲು ನೆಟ್ಟಿಗರು ಧ್ವನಿ ಎತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.