ನವದೆಹಲಿ: ‘ರಚನಾತ್ಮಕ ಸ್ವಾತಂತ್ರ್ಯ’ದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಮಾಜವನ್ನು ತುಚ್ಛವಾಗಿ ಬಿಂಬಿಸಲು ಸರ್ಕಾರ ಅನುವು ಮಾಡುವುದಿಲ್ಲ ಎಂದು ಒಟಿಟಿ ವೇದಿಕೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಂಗಳವಾರ ಹೇಳಿದರು.
ಒಟಿಟಿ ವೇದಿಕೆಗಳ ಪ್ರತಿನಿಧಿಗಳ ಜೊತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಅವರು ಹೇಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಅಪಾಯಕಾರಿ ಪ್ರಚಾರ ಮತ್ತು ಸೈದ್ಧಾಂತಿಕ ಪಕ್ಷಪಾತಕ್ಕಾಗಿ ಒಟಿಟಿ ವೇದಿಕೆಗಳನ್ನು ಸಾಧನಗಳನ್ನಾಗಿ ಬಳಸಬೇಡಿ ಎಂದು ಕೂಡಾ ಠಾಕೂರ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.