ADVERTISEMENT

ದೀಪಿಕಾ, ರಣವೀರ್‌ ಸಿಂಗ್‌ ದಂಪತಿಯನ್ನು ಅಭಿನಂದಿಸಿದ ಹಾಲಿವುಡ್ ನಟ ವಿಲ್‌ ಸ್ಮಿತ್

ಪಿಟಿಐ
Published 12 ಸೆಪ್ಟೆಂಬರ್ 2024, 11:12 IST
Last Updated 12 ಸೆಪ್ಟೆಂಬರ್ 2024, 11:12 IST
<div class="paragraphs"><p>ವಿಲ್ ಸ್ಮಿತ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್</p></div>

ವಿಲ್ ಸ್ಮಿತ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

   

ನವದೆಹಲಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದಂಪತಿಗೆ ಹಾಲಿವುಡ್‌ನ ಸೂಪರ್‌ಸ್ಟಾರ್ ವಿಲ್‌ಸ್ಮಿತ್‌ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

ಸೆ. 8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯವನ್ನು ದೀಪಿಕಾ ಹಾಗೂ ರಣವೀರ್ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಹಂಚಿಕೊಂಡಿದ್ದರು.

ADVERTISEMENT

‘ಕಿಂಗ್‌ ರಿಚರ್ಡ್‌’ ಚಿತ್ರಕ್ಕಾಗಿ ಆಸ್ಕರ್ ಪಡೆದಿರುವ ನಟ ವಿಲ್‌ ಸ್ಮಿತ್ ಅವರು ದೀಪಿಕಾ– ರಣವೀರ್ ದಂಪತಿಗೆ ಶುಭ ಕೋರಿ, ‘ಅಭಿನಂದನೆಗಳು ಮಮಾ ಮತ್ತು ಪಪಾ’ ಎಂದಿದ್ದಾರೆ.

ಬಾಲಿವುಡ್‌ನ ಅಲಿಯಾ ಭಟ್, ಅರ್ಜುನ್ ಕಪೂರ್, ಅನನ್ಯಾ ಪಾಂಡೆ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಜೋನ್ಸ್‌, ಕರೀನಾ ಕಪೂರ್ ಖಾನ್ ಹಾಗೂ ಕೃತಿ ಸನೋನ್ ಸೇರಿದಂತೆ ಬಹಳಷ್ಟು ಬಾಲಿವುಡ್ ನಟ, ನಟಿಯರು ಅಭಿನಂದನೆ ಸಲ್ಲಿಸಿದ್ದಾರೆ.

ದೀಪಿಕಾ ಹಾಗೂ ರಣವೀರ್ ಅವರು 2018ರಲ್ಲಿ ವಿವಾಹವಾಗಿದ್ದರು. ಇಟಲಿಯ ಲೇಕ್‌ ಕಮೊದಲ್ಲಿ ಅದ್ಧೂರಿ ವಿವಾಹ ಸಮಾರಂಭ ನೆರವೇರಿತ್ತು. ಕಳೆದ ಫೆಬ್ರುವರಿಯಲ್ಲಿ ಗರ್ಭ ಧರಿಸಿರುವ ವಿಷಯವನ್ನು ದೀಪಿಕಾ ಘೋಷಿಸಿಕೊಂಡಿದ್ದರು.

ಈ ದಂಪತಿ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಎಗೈನ್‌’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಜಯ್ ದೇವಗನ್‌ ಇದ್ದಾರೆ. ಚಿತ್ರವು ದೀಪಾವಳಿ ಸಂದರ್ಭದಲ್ಲಿ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.