ಮುಂಬೈ: ಅಭಿಮಾನಿಗಳನ್ನು ಮೆಚ್ಚಿಸಲು ಹೊರಟರೆ ಒಂದೇ ರೀತಿಯ ಚಿತ್ರಗಳನ್ನು ಮಾಡಬೇಕಾಗುತ್ತದೆ ಎಂದು ನಟ ಮೋಹನ್ ಲಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ‘ನಾನು ಒಬ್ಬ ನಟನಾಗಿವೈವಿಧ್ಯಮಯ ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ. ನನ್ನ ಆಯ್ಕೆ ಸಹವಿಭಿನ್ನವಾಗಿರುತ್ತವೆ‘ ಎಂದು ತಿಳಿಸಿದ್ದಾರೆ.
‘ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಒಂದೇ ರೀತಿಯ ಪ್ರಕಾರಗಳಲ್ಲಿ ನೋಡಲು ಇಷ್ಟಪಡುತ್ತಾರೆ. ಪ್ರತಿ ನಟನಿಗೂ ಈ ಭಾರ ಇದ್ದೇ ಇರುತ್ತದೆ. ಆದರೆ, ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರಗಳನ್ನು ಮಾಡಲು ಹೋದರೆ, ಒಂದೇ ರೀತಿ ಚಿತ್ರಗಳನ್ನು ಮಾಡಬೇಕಾಗುತ್ತದೆ‘ ಎಂದು ಮಲಯಾಳಂ ಸೂಪರ್ ಸ್ಟಾರ್ ಹೇಳಿದ್ದಾರೆ.
‘ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ. ಕಳೆದ ಬಾರಿ ‘ದೃಶ್ಯಂ–2‘ ಚಿತ್ರದಲ್ಲಿ ನಟಿಸಿದೆ. ಈ ಬಾರಿ ‘ಮರಕ್ಕಾರ್-ಅರಬ್ಬಿಕಡಲಿಂಡೆ ಸಿಂಹಂ’ ನಲ್ಲಿ ನಟಿಸಿದ್ದೇನೆ. ಈ ಎರಡೂ ಚಿತ್ರಗಳು ವಿಭಿನ್ನ ರೀತಿಯ ಅನುಭವಗಳನ್ನು ಕಟ್ಟಿಕೊಡುತ್ತವೆ.ನಿರ್ದಿಷ್ಟ ಪ್ರಕಾರಕ್ಕೆ ಜೋತು ಬೀಳಲು ನಾನು ಇಷ್ಟಪಡುವುದಿಲ್ಲ‘ ಎಂದು ಮೋಹನ್ ಲಾಲ್ ತಿಳಿಸಿದ್ದಾರೆ.
ಮರಕ್ಕಾರ್ ಚಿತ್ರ ಈಗಾಗಲೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿಯೂ ತೆರೆಕಾಣುತ್ತಿದೆ. ಪ್ರಿಯದರ್ಶನ್ ನಿರ್ದೇಶನದ ಸಿನಿಮಾ ಇದಾಗಿದ್ದು, ಆಶೀರ್ವಾದ್ ಸಿನೆಮಾಸ್‌ನ ಆ್ಯಂಟನಿ ಪೆರುಂಬಾವೂರ್ ನಿರ್ಮಾಪಕರಾಗಿದ್ದಾರೆ.ಮೋಹನ್‌ಲಾಲ್ ಜತೆಗೆ, ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಮಂಜು ವಾರಿಯರ್, ಕೀರ್ತಿ ಸುರೇಶ್ ‘ಮರಕ್ಕಾರ್’ ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.