ನವದೆಹಲಿ: ವೆಬ್ ಸಿರೀಸ್‌ನ ಸ್ಕ್ರಿಪ್ಟ್ ಓದದೆ ನಟ ಪಾತ್ರವನ್ನು ಒಪ್ಪಿಕೊಂಡಿರುವುದಿಲ್ಲ. ‘ನೀವು ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ತಾಂಡವ್ ವೆಬ್ ಸಿರೀಸ್ ನಟನ ಪರ ಹಾಜರಾಗಿದ್ದ ವಕೀಲರಿಗೆ ತಾಕೀತು ಮಾಡಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ಎದುರಿಸುತ್ತಿರುವ ಅಮೆಜಾನ್ ವೆಬ್ ಸೀರೀಸ್ ತಾಂಡವ್ ನಿರ್ಮಾಪಕ, ನಿರ್ದೇಶಕ, ಇತರರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಕ್ಲಬ್ ಮಾಡುವಂತೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದೆ.
ಈ ಮಧ್ಯೆ, ತಾಂಡವ್ ನಟ ಮೊಹಮ್ಮದ್ ಜೀಶನ್ ಅಯೂಬ್ ಅವರ ಪರ ವಕೀಲ ಸಿದ್ಧಾರ್ಥ್ ಅಗರ್ವಾಲ್, ಇದರಲ್ಲಿರುವ ಪಾತ್ರದ ಹೇಳಿಕೆಗಳು ನಟ ವೈಯಕ್ತಿಕವಾಗಿ ಹೇಳಿದಂತಲ್ಲ ಎಂದು ವಾದಿಸಿದರು.
ಆದರೆ, ನ್ಯಾಯಾಲಯ ಇದನ್ನು ಒಪ್ಪಿಕೊಂಡಂತೆ ಕಾಣಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿ ಎಂ.ಆರ್. ಶಾ, ಸ್ಕ್ರಿಪ್ಟ್ ಓದದೆ ನಟ ಪಾತ್ರವನ್ನು ಒಪ್ಪಿಕೊಂಡಿರುವುದಿಲ್ಲ.‘ನೀವು ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ’ ಎಂದು ಹೇಳಿದ್ದಾರೆ.
ಧಾರ್ಮಿಕ ಭಾವನೆಗಳನ್ನು ನೋಯಿಸುವ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲಾಗಿದೆ ಮತ್ತು ಕ್ಷಮೆಯಾಚಿಸಲಾಗಿದೆ ಎಂದು ನಾರಿಮನ್ ನ್ಯಾಯಾಲಯದ ಗಮನ ಸೆಳೆದರು. ಇದರ ಹೊರತಾಗಿಯೂ, ಇನ್ನೂ ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಇದೇವೇಳೆ, ಎಫ್‌ಐಆರ್‌ಗಳನ್ನು ರದ್ದುಪಡಿಸುವುದಕ್ಕಾಗಿ ನೀವೇಕೆ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲಿಲ್ಲ ಎಂದುನ್ಯಾಯಾಲಯಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, 6 ರಾಜ್ಯಗಳಲ್ಲಿ ಎಫ್‌ಐಆರ್ ಆಗಿವೆ ಮತ್ತು ದಿನೇ ದಿನೇ ಹೆಚ್ಚುತ್ತಿವೆ ಎಂದಿದ್ಧಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಿ, ಕ್ಷಮೆ ಕೋರಿದ್ದರೆ ಪೊಲೀಸರು ಕ್ಲೋಶರ್ ರಿಪೋರ್ಟ್ ಹಾಕಬಹುದು ಎಂದಿದ್ದಾರೆ.
ಇದು ಸಂವಿಧಾನದ ಆರ್ಟಿಕಲ್ 19 (1) (ಎ) ಅಡಿಯಲ್ಲಿ ವಾಕ್ ಸ್ವಾತಂತ್ಯದ ಪ್ರಕರಣ ಎಂದು ಒತ್ತಿ ಹೇಳಿದನಾರಿಮನ್, ರಿಪಬ್ಲಿಕ್ ಟಿವಿ ಸಂಪಾದಕ-ಅರ್ನಾಬ್ ಗೋಸ್ವಾಮಿ ಅವರ ಪ್ರಕರಣವನ್ನು ಉಲ್ಲೇಖಿಸಿ ಈ ಪ್ರಕರಣದಲ್ಲಿ ವಿವಿಧ ರಾಜ್ಯಗಳಲ್ಲಿ ಬಾಕಿ ಇರುವ ಎಫ್‌ಐಆರ್‌ಗಳನ್ನು ಕ್ಲಬ್ ಮಾಡಿದೆ ಎಂದು ವಾದಿಸಿದರು.
ನಾರಿಮನ್ ಅವರ ವಾದವನ್ನು ಮುಂದುವರಿಸಿದ ಅಮೆಜಾನ್ ಇಂಡಿಯಾ ಕ್ರಿಯೇಟಿವ್ ಹೆಡ್ ಅಪರ್ಣಾ ಪುರೋಹಿತ್ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ , “ಯಾವುದೇ ರಾಜಕೀಯ ವಿಡಂಬನೆಗೆ ಜನರು ತುಂಬಾ ಸಂವೇದನಾಶೀಲರಾಗಿದ್ದರೆ… ಕಲೆ, ಸಿನೆಮಾ, ಟಿವಿ ಎಲ್ಲವೂ ನಾಶವಾಗುತ್ತವೆ. ” ಎಂದು ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.