ADVERTISEMENT

ಬಾಲಿವುಡ್ ತೊರೆವ ನಿರ್ಧಾರ | ಝೈರಾಗೆ ಕಾಂಗ್ರೆಸ್ ಮುಖಂಡರ ಬೆಂಬಲ, ಶಿವಸೇನಾ ಟೀಕೆ

ಪಿಟಿಐ
Published 1 ಜುಲೈ 2019, 13:51 IST
Last Updated 1 ಜುಲೈ 2019, 13:51 IST
   

ನವದೆಹಲಿ: ಚಿತ್ರರಂಗದಿಂದ ದೂರವಾಗುವ ನಿರ್ಧಾರ ಪ್ರಕಟಿಸಿರುವ ನಟಿ ಝೈರಾ ವಾಸೀಂ ಅವರ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.

ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರು ಝೈರಾ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಶಿವಸೇನಾ ಟೀಕೆಗಳ ಸುರಿಮಳೆಗೈದಿದೆ.

ಕಾಂಗ್ರೆಸ್‌ ಮುಖಂಡಮಿಲಿಂದ್‌ ದೇವ್ರಾ, ‘ನಾನು ಇಲ್ಲಿ ಹಿಂದೂ ಮತ್ತು ಜೈನ್‌ ಸಮುದಾಯದ ಸ್ನೇಹಿತರನ್ನು ಹೊಂದಿದ್ದೇನೆ.ಅವರು ತಮ್ಮ ಗುರುಗಳು ಮತ್ತು ನಂಬಿಕೆಗಳಿಗಾಗಿ ವೃತ್ತಿಜೀವನವನ್ನು ತ್ಯಜಿಸಿದ್ದಾರೆ. ಅಪ್ರಾಪ್ತರನ್ನು ಹೊರತುಪಡಿಸಿ ಇತರರು ಜೀವನ ಪ್ರೀತಿ ಅಥವಾ ಧರ್ಮ ಇವೆರಡರಲ್ಲಿ ಯಾವುದು ನಿಮ್ಮ ವೃತ್ತಿ ಜೀವನವನ್ನು ನಿರ್ಧರಿಸುತ್ತದೆ ಎಂಬುದನ್ನು ಆಯ್ಕೆಮಾಡಿಕೊಳ್ಳಬಹುದು. ಉಳಿದವರು ತಮ್ಮ ಜೀವನದ ಬಗ್ಗೆ ನಿರ್ಧರಿಸಲು ಅವಕಾಶ ಕೊಡಿ’ ಎಂದು ಝೈರಾ ಮತ್ತು ನುಸ್ರತ್‌ ಜಹಾನ್‌ ಅವರನ್ನು ಉದ್ದೇಶಿಸಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಶ್ನಿಸಲು ನಾವ್ಯಾರು?: ಝೈರಾ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್‌ ಅಬ್ದುಲ್ಲಾ, ‘ಆಕೆಯ ಆಯ್ಕೆ ಬಗ್ಗೆ ಪ್ರಶ್ನಿಸಲು ನಾವ್ಯಾರು? ಇದು ಅವಳ ಬದುಕು. ಅವಳಿಗಿಷ್ಟ ಬಂದಂತೆ ಬದುಕುವ ಹಕ್ಕಿದೆ. ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ. ಒಟ್ಟಿನಲ್ಲಿ ಅವಳ ನಿರ್ಧಾರವು ಅವಳಿಗೆ ಸಂತೋಷ ಕೊಟ್ಟರೆ ಸಾಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸರಣಿ ಟ್ವೀಟ್‌ ಮೂಲಕ ನಟಿ ಝೈರಾ ಧರ್ಮಕ್ಕೆ ಅಪಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

‘ಪ್ರತಿಯೊಬ್ಬರು ತಮ್ಮ ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ, ಅದನ್ನು ವೃತ್ತಿ ಆಯ್ಕೆಯ ಅಸಹಿಷ್ಣುತೆಯಾಗಿ ಬಳಸಬಾರದು.ಝೈರಾ ಬರಹ ಧರ್ಮಕ್ಕೆ ಅಪಚಾರ ಮಾಡುತ್ತದೆ ಮತ್ತು ಇಸ್ಲಾಂ ಧರ್ಮದ ಅಸಹಿಷ್ಣುತೆಯನ್ನು ಬಲಪಡಿಸುತ್ತದೆ.

‘ಹಿಂದಿ ಸಿನಿಮಾಇದೇ ನಂಬಿಕೆಯುಳ್ಳ ಹಲವರ ಯಶಸ್ಸಿನ ಕಥೆಗಳನ್ನು ಕಂಡಿದೆ.ಝೈರಾ ಬರಹ ಈ ಎಲ್ಲಾ ಪ್ರಮುಖರಿಗೆ ತಮ್ಮ ಧರ್ಮದ ಬಗ್ಗೆ ತಿಳಿದಿರಲಿಲ್ಲ ಎಂಬುದನ್ನು ಸೂಚಿಸುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಚಿತ್ರಜಗತ್ತು ತನಗೆ ಸಂತಸ ತಂದಿಲ್ಲ. ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಈ ಕಾರಣದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಝೈರಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.