ಬೆಂಗಳೂರು: ತಾಯಿಯಾಗುವುದು ಮತ್ತು ಮಗುವಿನ ಪಾಲನೆ ಮಾಡುವುದು ಒಂದು ವಿಶೇಷ ಅನುಭವ ಎಂದು ನಟಿ ಎವೆಲಿನ್ ಶರ್ಮಾ ಹೇಳಿದ್ದಾರೆ.
ಜರ್ಮನಿ ಮೂಲದ ನಟಿ ಮತ್ತು ರೂಪದರ್ಶಿ ಎವೆಲಿನ್ ಲಕ್ಷ್ಮಿ ಶರ್ಮಾ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಭಾರತೀಯ ಮೂಲದ ದಂತ ವೈದ್ಯ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ತುಶಾನ್ ಭಿಂಡಿ ಜತೆ ಎವೆಲಿನ್ ಅವರ ವಿವಾಹ ಕಳೆದ ಮೇ ತಿಂಗಳಿನಲ್ಲಿ ನಡೆದಿತ್ತು.
ತಾಯಿಯಾಗಿರುವ ಎವೆಲಿನ್ ಅವರು, ಮಗುವಿನ ಜತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
2006ರಲ್ಲಿ ಎವೆಲಿನ್ ಅಮೆರಿಕನ್ ಚಿತ್ರ ‘ಟರ್ನ್ ಲೆಫ್ಟ್‘ ಮೂಲಕ ಅವರು ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದು, 2012ರಲ್ಲಿ ‘ಫ್ರಮ್ ಸಿಡ್ನಿ ವಿತ್ ಲವ್‘ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.