ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ಜೂನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಉದ್ಯಮಿ ನಿತಿನ್ ರಾಜು ಜತೆ ಮದುವೆಯಾದ ಬಳಿಕ ಪ್ರಣೀತಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.
ಹೆಣ್ಣು ಮಗುವಿನ ಜನಿಸಿದ ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಗುವಿನ ಬಗ್ಗೆ ಹೇಳಿಕೊಂಡಿದ್ದರು.
ಈ ಬಾರಿ ಮಗುವನ್ನು ಹಿಡಿದುಕೊಂಡಿರುವ ಫೋಟೊ ಪೋಸ್ಟ್ ಮಾಡಿರುವ ಪ್ರಣೀತಾ ಅವರು, ಇವರಿಬ್ಬರೂ ನನ್ನ ಬೂ ಬೂಗಳು ಎಂದು ಅಡಿಬರಹ ನೀಡಿದ್ದಾರೆ.
ಪ್ರಣೀತಾ ಪತಿ ನಿತಿನ್ ರಾಜು ಕೂಡ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಣೀತಾ ತಾಯಿ ಡಾ. ಜಯಶ್ರೀ ಅವರು ಸ್ತ್ರೀರೋಗ ತಜ್ಞೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.