ಬೆಂಗಳೂರು: ‘ಆರ್ಟ್ ಆಫ್ ಲಿವಿಂಗ್’ ನಿರ್ಮಿಸಿರುವ ಪ್ರಥಮ ವೆಬ್ ಸರಣಿ ‘ಆದಿ ಶಂಕರಾಚಾರ್ಯ’ದ ಟ್ರೇಲರ್ ವಿಜಯದಶಮಿಯಂದು ಬಿಡುಗಡೆಯಾಗಿದೆ.
ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ರವಿಶಂಕರ್, ‘ಆಗಾಗ ಜ್ಞಾನದ ಪುನರುಜ್ಜೀವನವಾಗುತ್ತಲೇ ಇರಬೇಕು. ಆದಿ ಶಂಕರರು ಜ್ಞಾನದ ಪುನರುತ್ಥಾನ ಮಾಡಿದವರು. ಅವರು ಭಕ್ತಿ, ಜ್ಞಾನ ಮತ್ತು ಕರ್ಮವನ್ನು ಒಂದಾಗಿ ತಂದರು. ‘ಜೀವನವು ದುಃಖಮಯವಲ್ಲ, ಆನಂದಮಯ’ ಎಂಬುದೇ ಅವರ ಸಂದೇಶವಾಗಿತ್ತು’ ಎಂದರು.
‘ಆದಿ ಶಂಕರರ ಬಾಲ್ಯ ಹಾಗೂ ಯೌವ್ವನದ ಸವಿಸ್ತಾರ ಚಿತ್ರಣ, ದೇಶದಾದ್ಯಂತ ಅವರ ಪಯಣ, ಆಧ್ಯಾತ್ಮಿಕತೆಯ ಪರಂಪರೆಯ ಪುನರುತ್ಥಾನವನ್ನು ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ಈ ಸರಣಿಯ ಸೀಸನ್ 1ರಲ್ಲಿ ತಲಾ 40 ನಿಮಿಷದ 10 ಧಾರಾವಾಹಿಗಳಿವೆ’ ಎಂದು ಶ್ರೀ ಶ್ರೀ ಪಬ್ಲಿಕೇಷನ್ಸ್ ಟ್ರಸ್ಟಿ ನಕುಲ್ ಧವನ್ ಮಾಹಿತಿ ನೀಡಿದರು.
ನಿರ್ದೇಶಕ ಓಂಕಾರ್ ನಾಥ್ ಮಾತನಾಡಿ, ‘ಆದಿ ಶಂಕರರ ಬುದ್ಧಿ, ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯು ದೇಶಕ್ಕೆ ಒಂದು ರೂಪವನ್ನೇ ನೀಡಿತು.ಈ ವೆಬ್ ಸರಣಿ ಆರ್ಟ್ ಆಫ್ ಲಿವಿಂಗ್ ಆ್ಯಪ್‌ನಲ್ಲಿ ನವೆಂಬರ್ 1ರಿಂದ ಲಭ್ಯವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.