ADVERTISEMENT

'ತಾಂಡವ್‌' ವೆಬ್‌ ಸರಣಿ ವಿವಾದ: ಕ್ಷಮೆ ಕೋರಿದ 'ಅಮೆಜಾನ್‌ ಪ್ರೈಮ್‌'

ಪಿಟಿಐ
Published 2 ಮಾರ್ಚ್ 2021, 14:45 IST
Last Updated 2 ಮಾರ್ಚ್ 2021, 14:45 IST
ತಾಂಡವ್‌ ವೆಬ್‌ ಸರಣಿಯ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ ಕಂಡು ಬಂದಿದ್ದ ದೃಶ್ಯ (ಎಎಫ್‌ಪಿ ಚಿತ್ರ)
ತಾಂಡವ್‌ ವೆಬ್‌ ಸರಣಿಯ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ ಕಂಡು ಬಂದಿದ್ದ ದೃಶ್ಯ (ಎಎಫ್‌ಪಿ ಚಿತ್ರ)   

ದೆಹಲಿ: 'ತಾಂಡವ್‌' ವೆಬ್‌ ಸರಣಿಯ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಸ್ಟ್ರೀಮಿಂಗ್‌ ವೇದಿಕೆ 'ಅಮೆಜಾನ್‌ ಪ್ರೈಮ್‌' ಮಂಗಳವಾರ ಬೇಷರತ್‌ ಕ್ಷಮೆ ಕೋರಿದೆ. ಅಲ್ಲದೆ, ಆಕ್ಷೇಪಿಸಲಾದ ದೃಶ್ಯಾವಳಿಗಳನ್ನು ತೆಗೆದುಹಾಕಿರುವುದಾಗಿ ಖಚಿತಪಡಿಸಿದೆ.

ಸೈಫ್ ಅಲಿ ಖಾನ್ ಮತ್ತು ಮೊಹಮ್ಮದ್ ಝೀಷನ್ ಅಯೂಬ್ ಅಭಿನಯದ, ರಾಜಕೀಯ ಕಥಾಹಂದರದ ವೆಬ್‌ ಸರಣಿಯ ಕಾಲೇಜಿನ ನಾಟಕದ ದೃಶ್ಯಕ್ಕೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿತ್ತು. ಈ ಕಾರ್ಯಕ್ರಮವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಆರೋಪಿಸಿ ಹಲವು ಎಫ್‌ಐಆರ್‌ ದಾಖಲಾಗಿದ್ದವು.

ADVERTISEMENT

'ಇತ್ತೀಚೆಗೆ ಪ್ರಾರಂಭವಾದ ವೆಬ್‌ ಸರಣಿ 'ತಾಂಡವ್‌'ನಲ್ಲಿ ಕೆಲವು ದೃಶ್ಯಗಳನ್ನು ಆಕ್ಷೇಪಾರ್ಹವೆಂದು ವೀಕ್ಷಕರು ಪರಿಗಣಿಸಿದ್ದಾರೆ. ಇದು ನಮ್ಮ ಉದ್ದೇಶವಾಗಿರಲಿಲ್ಲ. 'ಅಮೆಜಾನ್ ಪ್ರೈಮ್' ಮತ್ತೊಮ್ಮೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿದೆ. ಆಕ್ಷೇಪಿಸಿದ ದೃಶ್ಯಗಳನ್ನು ನಮ್ಮ ಗಮನಕ್ಕೆ ಬಂದ ಕೂಡಲೇ ತೆಗೆದುಹಾಕಲಾಗಿದೆ,' ಎಂದು ಪ್ರೈಮ್‌ ತಿಳಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ವೆಬ್‌ ಸರಣಿಯ ನಿರ್ದೇಶ ಅಲಿ ಅಬ್ಬಾಸ್‌ ಜಾಫರ್‌ ಮತ್ತು ತಂಡದವರು ಈಗಾಗಲೇ ಕ್ಷಮೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.