ಬೆಂಗಳೂರು: ನಟಿ ಮತ್ತು ರೂಪದರ್ಶಿ ಅಂಜಿನಿ ಧವನ್ ತಮ್ಮ ಪ್ರವಾಸದ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹವಾ ಸೃಷ್ಟಿಸಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್ ಸಂಬಂಧಿಯೂ ಆಗಿರುವ ಅಂಜಿನಿ, ಸೂರ್ಯಾಸ್ತ, ಸಮುದ್ರ ತೀರದ ಸಂಜೆಯನ್ನು ಇಷ್ಟಪಡುತ್ತಾರೆ.
ಪ್ರವಾಸ ಮುಗಿಸಿ ಬಂದಿದ್ದರೂ, ಇನ್ನೂ ಅದೇ ಗುಂಗಿನಲ್ಲಿ ಇದ್ದೇನೆ, ಮತ್ತೆ ಅಲ್ಲಿಗೆ ಹೋಗಬೇಕೆನಿಸುತ್ತದೆ ಎಂದು ಅಂಜಿನಿ ಹೇಳಿಕೊಂಡಿದ್ದಾರೆ.
ಕೂಲಿ ನಂ. 1 ಚಿತ್ರದಲ್ಲಿ ಅಂಜಿನಿ ಸಹ ನಿರ್ದೇಶನ ಮಾಡಿದ್ದರು. ಸಿದ್ಧಾರ್ಥ್ ಧವನ್ ಮತ್ತು ರಾಖಿ ಟಂಡನ್ ಪುತ್ರಿಯಾಗಿರುವ ಅಂಜಿನಿ, ಪ್ರವಾಸ ಮತ್ತು ಫ್ಯಾಷನ್ ಕುರಿತು ಹೆಚ್ಚಿನ ಒಲವು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.