ಬೆಂಗಳೂರು: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಅಕ್ಟೋಬರ್ 2ರಂದು ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್ ಅವರಿಗೆ ಎನ್‌ಸಿಬಿ ಆಪ್ತ ಸಮಾಲೋಚನೆ ನಡೆಸಿದೆ.
ಶಾರುಖ್ ಪುತ್ರ ಆರ್ಯನ್ ಖಾನ್ ಬಂಧನವಾದ ಬಳಿಕ ಜಾಮೀನು ಅರ್ಜಿ ಸಲ್ಲಿಸಲಾಗಿದೆಯಾದರೂ, ಅ. 20ರವರೆಗೆ ನ್ಯಾಯಾಂಗ ಬಂಧನದಲ್ಲಿರಬೇಕಿದೆ. ಅರ್ಜಿ ವಿಚಾರಣೆ ನಡೆದ ಬಳಿಕ ತೀರ್ಪು ಬರಲಿದೆ.
ಈ ಸಂದರ್ಭದಲ್ಲಿ ಎನ್‌ಸಿಬಿ ಕಚೇರಿಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಪ್ತ ಸಮಾಲೋಚಕರು ವಿಶೇಷ ಕೌನ್ಸೆಲಿಂಗ್ ನಡೆಸಿದ್ದಾರೆ.
ಅದರಂತೆ ಕೌನ್ಸೆಲಿಂಗ್‌ಗೆ ಒಳಗಾದ ಬಳಿಕ ಆರ್ಯನ್ ಖಾನ್, ಮುಂದೆ ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬಾಳುತ್ತೇನೆ, ಬಡವರ ಉದ್ಧಾರಕ್ಕೆ ಶ್ರಮಿಸುತ್ತೇನೆ, ಮುಂದೆ ಎನ್‌ಸಿಬಿ ಅಧಿಕಾರಿಗಳು ಕೂಡ ಮೆಚ್ಚುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.